ಮನೆ ಬಿಟ್ಟು ಹೋಗಿದ್ದ ಮಗ 22 ವರ್ಷಗಳ ಬಳಿಕ ಸನ್ಯಾಸಿಯಾಗಿ ತಾಯಿ ಮುಂದೆ ಭಿಕ್ಷೆ ಬೇಡಿದ : ವೀಡಿಯೋ ವೈರಲ್

ಉತ್ತರ ಪ್ರದೇಶ: ಸುಮಾರು 22 ವರ್ಷಗಳ ಹಿಂದೆ ಮನೆಯನ್ನು ಬಿಟ್ಟು ಹೋಗಿದ್ದ ಮಗನೊಬ್ಬ ಸನ್ಯಾಸಿಯಾಗಿ ಯಾಗಿ ಬಂದು ತಾಯಿ ಎದುರು ಭಿಕ್ಷೆ ಬೇಡಿದ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿದೆ.

ದೆಹಲಿಯ ರತಿಪಾಲ್ ಸಿಂಗ್ ಅವರ ಮಗನಾದ ಪಿಂಕು 2002 ರಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮನೆ ಪಕ್ಕದ ಸ್ನೇಹಿತರೊಂದಿಗೆ ಗೋಲಿಯಾಟವನ್ನು ಆಡುವ ಸಂದರ್ಭದಲ್ಲಿ ತಂದೆ ಜೋರು ಮಾಡಿದ್ದಾರೆ. ಇದಾದ ಬಳಿಕ ತಾಯಿ ಭಾನುಮತಿ ಕೂಡ ಮಗನಿಗೆ ಗದರಿಸಿದ್ದಾರೆ.ಈ ಸಣ್ಣ ಕಾರಣಕ್ಕಾಗಿಯೇ ಮನನೊಂದು ಮನೆಬಿಟ್ಟು ತೆರಳಿದ್ದಾನೆ.

ಬಾಲ್ಯದಲ್ಲಿ ನಡೆದ ಸಣ್ಣ ಘಟನೆಯ ಕೋಪದಿಂದಾಗಿ ಸುಮಾರು 22 ವರ್ಷ್ಗಳ ಕಾಲ ಕುಟುಂಬದಿಂದ ದೂರವಾಗಿ ಊರಿಂದ ಊರಿಗೆ ಅಲೆದಾಡುತ್ತಾ ಕಾಲ ಕಳೆಯುತ್ತಿದ್ದು. ಕೆಲದಿನಗಳ ಹಿಂದೆ ಆತ ಸನ್ಯಾಸಿಯಾಗಿ ಊರಿಗೆ ಮರಳಿದ್ದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇಹದ ಮೇಲಿನ ಗಾಯದಿಂದ ಅವರು ತನ್ನ ಮಗ ಎಂದು ಗುರುತಿಸಿದರು.

ಸನ್ಯಾಸಿಯಾದ ಮಗನು ಪೋಷಕರ ಮುಂದೆ ರಾಜ ಭರ್ತಾರಿಯ ಕಥೆಯನ್ನು ಸಾರಂಗಿಯಲ್ಲಿ ನುಡಿಸಿದ್ದಾನೆ. ರಾಜ ಭರ್ತಾರಿ ಸನ್ಯಾಸಿಯಾಗಲು ಸಮೃದ್ಧ ರಾಜ್ಯವನ್ನು ಹೇಗೆ ತೊರೆದನು ಎಂಬುದು ಹಾಡಿನ ಸಾಹಿತ್ಯವಾಗಿದ್ದು ಬಳಿಕ ಪಿಂಕು ಸನ್ಯಾಸಿಯಾಗಿ ತನ್ನ ತಾಯಿಯ ಬಳಿಯಿಂದ ಭಿಕ್ಷೆಯನ್ನು ತೆಗೆದುಕೊಂಡು ಹಳ್ಳಿಯಿಂದ ತೆರಳಿದ್ದಾರೆ.

ತಾನು ಕುಟುಂಬದೊಂದಿಗೆ ಮತ್ತೆ ಒಂದಾಗಲು ನಾನು ಬಂದಿಲ್ಲ. ಸನ್ಯಾಸಿಯ ಜೀವನದ ಸಂಪ್ರದಾಯಕ ಪ್ರಕಾರ ಸನ್ಯಾಸಿಗಳು ತಮ್ಮ ತಾಯಿಯಿಂದ ಭಿಕ್ಷೆ ಸ್ವೀಕರಿಸುವ ಆಚರಣೆಯನ್ನು ಪೂರ್ಣಗೊಳಿಸಬೇಕು ಆದ್ದರಿಂದ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ತನ್ನ ಮಗ ಸೇರಿರುವ ಧಾರ್ಮಿಕ ಪಂಥ ಆತನನ್ನು ಬಿಡುಗಡೆ ಮಾಡಲು 11 ಲಕ್ಷ ರೂ. ಕೇಳುತ್ತಿದೆ ಎಂದು ಪಿಂಕು ತಂದೆ ಆರೋಪಿಸಿದ್ದಾರೆ. ತನ್ನ ಬಳಿ ಅಷ್ಟು ಹಣವಿಲ್ಲ ಎಂದು ಪಿಂಕು ಅವರ ತಂದೆ ಹೇಳಿ ಭಾವುಕರಾಗಿದ್ದಾರೆ.

Comments (0)
Add Comment