ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಸೆ.15ರೊಳಗೆ ಬೆಳೆ ಸಮೀಕ್ಷೆಗೆ ಸೂಚನೆ

 

ಚಿತ್ರದುರ್ಗ: 2023-24ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ಮಿಮೆ (ಖ-WಃಅIS) ಯೋಜನೆಯಲ್ಲಿ 2021-22, 2022-23ನೇ ಸಾಲಿನಲ್ಲಿ ಬೆಳೆ ಸಮೀಕ್ಷೆಯಾಗದ ಅಡಿಕೆ, ಮಾವು ಮತ್ತು ದಾಳಿಂಬೆ ಬೆಳೆಗಳಿಗೆ ಬೆಳೆ ವಿಮೆಗೆ ನೊಂದಾಯಿತ ರೈತರು ಇದೇ ಸೆಪ್ಟೆಂಬರ್ 15ರೊಳಗಾಗಿ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳುವ ಷರತ್ತಿನ ಮೇಲೆ ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಲಾಗಿರುತ್ತದೆ.

ಈ ಕೂಡಲೇ ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅಥವಾ ಗ್ರಾಮದ ಬೆಳೆ ಸಮೀಕ್ಷೆದಾರರಿಂದ ಬೆಳೆ ಸಮೀಕ್ಷೆ ಮಾಡಿದಲ್ಲಿ ಈ ವರ್ಷದ ಬೆಳೆ ವಿಮೆ ಯೋಜನೆಯಡಿ ಅರ್ಹರಾಗಿರುತ್ತಾರೆ. ಇಲ್ಲವಾದಲ್ಲಿ ತಮ್ಮ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆದುದರಿಂದ ರೈತರು ಈ ಕೂಡಲೇ ಬೆಳೆ ಸಮೀಕ್ಷೆಯನ್ನು ನಿಗಧಿತ ಸಮಯದೊಳಗೆ ಮಾಡಿಸಿಕೊಳ್ಳಲು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರವರ ಕಚೇರಿ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿಗಳ ರೈತರ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಸೆ.15ರೊಳಗೆ ಬೆಳೆ ಸಮೀಕ್ಷೆಗೆ ಸೂಚನೆ
Comments (0)
Add Comment