ಮಳೆಗಾಲಕ್ಕೆ ಅಶ್ವಗಂಧ ಮತ್ತು ತುಳಸಿ ಬೇಕೇ ಬೇಕು ಎನ್ನುವುದು ಇದಕ್ಕೆ..!

ಮಳೆಗಾಲದ ಸಂದರ್ಭದಲ್ಲಿ ನಮ್ಮ ಆರೋಗ್ಯಕ್ಕೆ ರಕ್ಷಣೆ ಒದಗಿಸುವ ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಅಶ್ವಗಂಧ ಮತ್ತು ತುಳಸಿ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಲವು ವಿಧದ ಗಿಡಮೂಲಿಕೆಗಳಿವೆ. ಅದರಲ್ಲಿ ಪ್ರಮುಖವಾಗಿ ಅಶ್ವಗಂಧ ಮತ್ತು ತುಳಸಿ ಮುಂಚೂಣಿಯಲ್ಲಿ ಕಂಡುಬರುತ್ತವೆ. ಏಕೆಂದರೆ ಇವೆರಡೂ ಸಹ ಆಯುರ್ವೇದ ಪದ್ಧತಿಯಲ್ಲಿ ವಿಶೇಷವಾದ ಸ್ಥಾನಮಾನವನ್ನು ಪಡೆದಿವೆ.

ಮಳೆಗಾಲದ ಸಂದರ್ಭದಲ್ಲಿ ಸೋಂಕು ಎದುರಾಗದಂತೆ ನೋಡಿಕೊಳ್ಳಲು ಹೇಳಿ ಮಾಡಿಸಿದಂತಿವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ನಮ್ಮ ಆರೋಗ್ಯ ಹದಗೆಡುತ್ತದೆ. ಸಣ್ಣ ಪುಟ್ಟ ನೆಗಡಿ, ಕೆಮ್ಮು, ಜ್ವರ ನಿರ್ಲಕ್ಷ್ಯ ಮಾಡಿ ಹಾಗೆ ಬಿಟ್ಟರೆ ಆನಂತರ ದೊಡ್ಡದಾಗುತ್ತದೆ. ಆದರೆ ಅಶ್ವಗಂಧ ಮತ್ತು ತುಳಸಿ ಸೇವನೆಯಿಂದ ನಮ್ಮ ರೋಗ ನಿರೋಧಕ ವ್ಯವಸ್ಥೆ ಅಭಿವೃದ್ಧಿಯಾಗುತ್ತದೆ.

ಅಶ್ವಗಂಧದ ಆರೋಗ್ಯ ಪ್ರಯೋಜನಗಳು:

ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ: ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಅಶ್ವಗಂಧ ಗಿಡಮೂಲಿಕೆ ನಮ್ಮ ಮಾನಸಿಕ ಒತ್ತಡವನ್ನು ನಿರ್ವಹಣೆ ಮಾಡುವುದು ಮಾತ್ರವಲ್ಲದೆ ಬೇರೆ ಪ್ರಯೋಜನಗಳ ಜೊತೆಗೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಮಳೆಗಾಲದಲ್ಲಿ ವೃದ್ಧಿಸುತ್ತದೆ.

ಮಳೆಗಾಲದಲ್ಲಿ ಎದುರಾಗುವ ಸಣ್ಣ ಪುಟ್ಟ ಆರೋಗ್ಯ ಸೋಂಕು ಗಳಿಂದ ನಮ್ಮನ್ನು ಕಾಪಾ ಡುತ್ತದೆ ಮತ್ತು ನಾವು ಆಸ್ಪತ್ರೆ ಪಾಲಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ ಎಂದು ಆಯುರ್ವೇದ ತಜ್ಞರಾದ ಡಾ. ಮೃಣಾಲ್ ಗೋಲ್ ಹೇಳಿದ್ದಾರೆ.​

ಇದರಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚು:

ಅಶ್ವಗಂಧ ತನ್ನಲ್ಲಿ ಅಪಾರವಾದ ಆಂಟಿ ಆಕ್ಸಿಡೆಂಟ್ ಅಂಶ ಗಳನ್ನು ಒಳಗೊಂಡಿರುವುದರಿಂದ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ಹಾವಳಿಯನ್ನು ತಪ್ಪಿಸುತ್ತದೆ ಮತ್ತು ನಮ್ಮ ಜೀವಕೋಶಗಳನ್ನು ಆಕ್ಸಿ ಡೆಟಿವ್ ಒತ್ತಡದಿಂದ ಕಾಪಾಡುತ್ತದೆ.

ವೈದ್ಯರು ಹೇಳುವ ಹಾಗೆ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತವೆ ಮತ್ತು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿ ಸಲು ನೆರವಾಗುತ್ತವೆ.​​

ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ:

ಮಾನಸಿಕವಾಗಿ ನಾವು ಹೆಚ್ಚು ಆತಂಕಕ್ಕೆ ಮತ್ತು ಒತ್ತಡಕ್ಕೆ ಒಳಗಾದರೆ ಅದರಿಂದ ನಮ್ಮ ಸಂಪೂರ್ಣ ಆರೋಗ್ಯ ಹದಗೆ ಡುತ್ತದೆ. ನಮ್ಮ ರೋಗನಿರೋಧಕ ಶಕ್ತಿ ಈ ಸಂದರ್ಭದಲ್ಲಿ ಸಾಕಷ್ಟು ಹಾನಿಯಾಗುತ್ತದೆ ಮತ್ತು ನಮ್ಮ ದೇಹ ಸೋಂಕುಗಳಿಗೆ ಒಳಗಾಗುತ್ತದೆ.

ಮಳೆಗಾಲದಲ್ಲಿ ಅಶ್ವಗಂಧ ಸೇವನೆ ಹೇಗೆ?

ಹಾಲಿನಲ್ಲಿ ಅಶ್ವಗಂಧ ಚೂರ್ಣವನ್ನು ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹಾಲು ಮತ್ತು ಅಶ್ವಗಂಧ ನಮ್ಮ ನರಮಂಡಲ ವ್ಯವಸ್ಥೆಯನ್ನು ಶಾಂತಗೊಳಿಸಿ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುತ್ತದೆ.

ವಯಸ್ಸಾಗಿರುವವರಿಗೆ ಅಶ್ವಗಂಧ ಚೂರ್ಣವನ್ನು ತುಪ್ಪದಲ್ಲಿ ಹುರಿದು ಉಗುರು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಸೇವಿಸಲು ಕೊಡಬೇಕು.​

ತುಳಸಿಯ ಆರೋಗ್ಯ ಪ್ರಯೋಜನಗಳು:

ತುಳಸಿ ಒಂದು ಶಕ್ತಿಯುತವಾದ ಗಿಡಮೂಲಿಕೆ ಆಗಿದ್ದು, ವಿಶೇಷ ವಾಗಿ ನಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ತುಳಸಿ ಏಕೆ ಅವಶ್ಯಕ ಎಂಬುದನ್ನು ನೋಡುವುದಾದರೆ…

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ:

ಪ್ರತಿದಿನ ಖಾಲಿ ಹೊಟ್ಟೆಗೆ ತುಳಸಿ ಎಲೆಯ ಸೇವನೆಯಿಂದ ನಮ್ಮ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ ಮತ್ತು ನಮ್ಮ ದೇಹ ಸೋಂಕುಗಳಿಂದ ರಕ್ಷಿಸಲ್ಪಡುತ್ತದೆ. ಇದು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಪ್ರಭಾವಿತವಾಗಿದೆ.

ಇದರಲ್ಲಿ ಆಂಟಿ ಮೈಕ್ರೋಬಿಯಲ್ ಗುಣವಿದೆ:

ತುಳಸಿ ತನ್ನಲ್ಲಿ ಆಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಒಳಗೊಂಡಿದ್ದು, ತನ್ನ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್ ಮತ್ತು ಆಂಟಿ ಫಂಗಲ್ ಲಕ್ಷಣಗಳಿಂದ ಹಲವು ವಿಧದ ಸೋಂಕು ಗಳ ವಿರುದ್ಧ ಹೋರಾಡಿ ನಮ್ಮ ದೇಹಕ್ಕೆ ಹೆಚ್ಚುವರಿ ರಕ್ಷಣೆ ಯನ್ನು ಕೊಡುತ್ತದೆ.

ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲಮೇಟರಿ ಲಕ್ಷಣಗಳು:

ತುಳಸಿ ತನ್ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿದ್ದು, ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಣ ಮಾಡುತ್ತದೆ, ಜೊತೆಗೆ ರೋಗ ನಿರೋಧಕ ವ್ಯವಸ್ಥೆಯನ್ನು ಬಲ ಪಡಿಸುತ್ತದೆ. ತನ್ನ ಆಂಟಿ ಇಂಪ್ಲಾಮೆಟರಿ ಗುಣಲಕ್ಷಣಗಳಿಂದ ದೇಹದಲ್ಲಿ ಉರಿಯುತ ನಿವಾರಣೆಯಾಗುತ್ತದೆ ಮತ್ತು ರೋಗ ನಿರೋಧಕ ಪ್ರತಿಕ್ರಿಯೆ ಹೆಚ್ಚಾಗುತ್ತದೆ.

ಮಳೆಗಾಲದಲ್ಲಿ ತುಳಸಿ ಸೇವನೆ ಹೇಗೆ?:

ತಾಜಾ ತುಳಸಿ ರಸ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ನಾವು ಸೇವಿಸುವ ಆಹಾ ರದಲ್ಲಿ ಸಿಗುವ ಪೌಷ್ಟಿಕ ಸತ್ವಗಳನ್ನು ಹೀರಿ ಕೊಳ್ಳಲು ಸಹಾಯ ಮಾಡುತ್ತದೆ.

ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಎರಡ ರಿಂದ ಮೂರು ತುಳಸಿ ಎಲೆಗಳನ್ನು ಸೇವಿಸುವುದರಿಂದ ನಮ್ಮ ರೋಗ ನಿರೋಧಕ ವ್ಯವಸ್ಥೆ ಅಭಿವೃದ್ಧಿಯಾಗು ತ್ತದೆ ಮತ್ತು ತುಳಸಿ ಎಲೆಗಳ ಚಹಾ ಕುಡಿಯುವುದರಿಂದ ಲೂ ಸಹ ಸಾಕಷ್ಟು ಉಪಯೋಗವಿದೆ.

ಅಶ್ವಗಂಧ ಮತ್ತು ತುಳಸಿ ಚಹಾ ತಯಾರು ಮಾಡುವ ಬಗೆ:

ಅಶ್ವಗಂಧ ಮತ್ತು ತುಳಸಿ ಎರಡು ಸಹ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೀಗಾಗಿ ಒಂದು ಟೀ ಚಮಚ ಅಶ್ವಗಂಧ ಪೌಡರ್‌ ತೆಗೆದು ಕೊಂಡು ಅದಕ್ಕೆ ಐದರಿಂದ ಆರು ಹಸಿ ತುಳಸಿ ಎಲೆಗ ಳನ್ನು ಕುದಿಯುವ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸ್ವಲ್ಪ ಆರಿದ ನಂತರ ಅದಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪಾನೀಯವಾಗಿ ತಯಾರಿಸಬಹುದು.

ನಿಯಮಿತವಾಗಿ ಅಶ್ವಗಂಧ ಮತ್ತು ತುಳಸಿ ಚಹಾ ಸೇವನೆ ಮಾಡುವುದರಿಂದ ಮಳೆಗಾಲದಲ್ಲಿ ಆರೋಗ್ಯಕರವಾಗಿ ಉಳಿಯಬಹುದು.​

Comments (0)
Add Comment