ಮಹಾಕ್ವಿಜ್‌ನಲ್ಲಿ ಭಾಗವಹಿಸುವಂತೆ ಇಸ್ರೋ ಮುಖ್ಯಸ್ಥರು ಮನವಿ

ಬೆಂಗಳೂರು: ಭಾರತದ ಅದ್ಭುತ ಬಾಹ್ಯಾಕಾಶ ಪರಿಶೋಧನಾ ಪ್ರಯಾಣವನ್ನು ಗೌರವಿಸಲು ಮತ್ತು ಐತಿಹಾಸಿಕ ಚಂದ್ರನ ಲ್ಯಾಂಡಿಂಗ್ ಅನ್ನು ಆಚರಿಸಲು ಎಲ್ಲಾ ಭಾರತೀಯ ನಾಗರಿಕರು ಚಂದ್ರಯಾನ-3 ಮಹಾಕ್ವಿಜ್‌ನಲ್ಲಿ ಭಾಗವಹಿಸುವಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 1ರಿಂದಲೇ ಇಸ್ರೋ ಈ ಕ್ವಿಜ್ ನಡೆಸುತ್ತಿದ್ದು, ಇಲ್ಲಿಯವರೆಗೆ 16 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವುದು ವಿಶೇಷ. ರಸಪ್ರಶ್ನೆಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು.

ಸರ್ಕಾರದ ಮೈ ಗವ್ ಡಾಟ್ ಇನ್ ವೆಬ್​ಸೈಟ್​ನಲ್ಲಿ (www.mygov.in) ಈ ಕ್ವಿಜ್​ಗಾಗಿ ಮಿನಿ ಪೋರ್ಟಲ್ (isroquiz.mygov.in) ರಚಿಸಲಾಗಿದೆ. ಇಸ್ರೋ ಈ ಪೋರ್ಟಲ್ ಅನ್ನು ನಿರ್ವಹಿಸುತ್ತಿದ್ದು, ಚಂದ್ರಯಾನದ ರಸಪ್ರಶ್ನೆಗಳನ್ನು ರೂಪಿಸಿದೆ. ಈ ಕ್ವಿಜ್​ನಲ್ಲಿ ಯಾವುದಾದರೂ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 300 ಸೆಕೆಂಡುಗಳ ಕಾಲಾವಕಾಶ ಇರುತ್ತದೆ. 300ಕ್ಕೂ ಹೆಚ್ಚು ಮಂದಿಗೆ ಬಹುಮಾನ ನೀಡಲಾಗುತ್ತದೆ.ಈ ಐತಿಹಾಸಿಕ ಚಂದ್ರನ ಲ್ಯಾಂಡಿಂಗ್ ಅನ್ನು ಒಟ್ಟಿಗೆ ಆಚರಿಸೋಣ” ಎಂದು ಇಸ್ರೋ ಎಕ್ಸ್‌ ನಲ್ಲಿ ಬರೆದಿದ್ದಾರೆ.

ಚಂದ್ರಯಾನ-3 ಮಹಾಕ್ವಿಜ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಎರಡನೇ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ರೂ 75,000 ನಗದು ಬಹುಮಾನದೊಂದಿಗೆ ನೀಡಲಾಗುವುದು.ಇನ್ನು ಮೂರನೇ ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ ರೂ 50,000 ನಗದು ಬಹುಮಾನವನ್ನು ನೀಡಲಾಗುತ್ತದೆ.ಮುಂದಿನ 100 ಉತ್ತಮ ಸಾಧಕರಿಗೆ ತಲಾ 2,000 ರೂ.ಗಳ ಸಮಾಧಾನಕರ ಬಹುಮಾನ ನೀಡಲಾಗುವುದು.ಮುಂದಿನ 200 ಉತ್ತಮ ಸಾಧಕರಿಗೆ ತಲಾ 1,000 ರೂ.ಗಳ ಸಮಾಧಾನಕರ ಬಹುಮಾನ ನೀಡಲಾಗುವುದು.

Comments (0)
Add Comment