ಮಾರ್ಚ್ ತಿಂಗಳಲ್ಲಿ 14 ದಿನ ಬ್ಯಾಂಕ್ ಬಂದ್ : RBI ಹಾಲಿಡೇ ಲಿಸ್ಟ್ ಹೀಗಿದೆ..

ನವದೆಹಲಿ : ಮಾರ್ಚ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 14 ದಿನಗಳ ಕಾಲ ರಜೆಯಿದೆ. ಮಹಾಶಿವರಾತ್ರಿ, ಹೋಳಿ, ಗುಡ್ ಫ್ರೈಡೇ ಸೇರಿದಂತೆ ಮಾರ್ಚ್ ತಿಂಗಳಲ್ಲಿ ವಿವಿಧ ಹಬ್ಬಗಳು ಹಾಗೂ ವಿಶೇಷ ದಿನಗಳ ಪ್ರಯುಕ್ತ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಇನ್ನು ಭಾನುವಾರ, ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ಬ್ಯಾಂಕುಗಳಿಗೆ ರಜೆಯಿದೆ. ಮಾರ್ಚ್ ತಿಂಗಳು ಆರ್ಥಿಕ ಸಾಲಿನ ಕೊನೆಯ ತಿಂಗಳಾಗಿರುವ ಕಾರಣ ಕೆಲವು ಪ್ರಮುಖ ಕೆಲಸಗಳಿಗೆ ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಎದುರಾಗಬಹುದು. ಅಂಥ ತುರ್ತು ಕೆಲಸಗಳಿದ್ರೆ ರಜಾಪಟ್ಟಿಯನ್ನು ನೋಡಿಕೊಂಡು ಬ್ಯಾಂಕಿಗೆ ಭೇಟಿ ನೀಡಿ. ಮಾರ್ಚ್ ತಿಂಗಳ ರಜಾಪಟ್ಟಿ ಹೀಗಿದೆ: ಮಾರ್ಚ್ 1: ಛಪ್ ಛರ್ ಕುತ್ (ಮಿಜೋರಾಂ) ಮಾರ್ಚ್ 3: ಭಾನುವಾರ ಮಾರ್ಚ್ 8: ಮಹಾಶಿವರಾತ್ರಿ (ನವದೆಹಲಿ, ಬಿಹಾರ್, ರಾಜಸ್ಥಾನ, ತಮಿಳು ನಾಡು, ತ್ರಿಪುರ, ಪಶ್ಚಿಮ ಬಂಗಾಳ, ಮಿಜೋರಾಂ, ಅಸ್ಸಾಂ, ಮಣಿಪುರ, ಮೇಘಾಲಯ, ಸಿಕ್ಕಿಂ, ನಾಗಲ್ಯಾಂಡ್, ಇಟಾನಗರ್, ಗೋವಾ) ಮಾರ್ಚ್ 9: ಎರಡನೇ ಶನಿವಾರ ಮಾರ್ಚ್ 10: ಭಾನುವಾರ ಮಾರ್ಚ್ 17: ಭಾನುವಾರ ಮಾರ್ಚ್ 22: ಬಿಹಾರ ದಿವಸ್ (ಬಿಹಾರ) ಮಾರ್ಚ್ 23: ನಾಲ್ಕನೇ ಶನಿವಾರ ಮಾರ್ಚ್ 24: ಭಾನುವಾರ ಮಾರ್ಚ್ 25: ಹೋಳಿ (ಕರ್ನಾಟಕ, ಒಡಿಶಾ, ತಮಿಳು ನಾಡು ಮಣಿಪುರ್, ಕೇರಳ, ನಾಗಲ್ಯಾಂಡ್, ಬಿಹಾರ, ಶ್ರೀನಗರ ಹೊರತುಪಡಿಸಿ) ಮಾರ್ಚ್ 26: ಯೋಸ್ಯಾಂಗ್ ಎರಡನೇ ದಿನ /ಹೋಳಿ (ಒಡಿಶಾ, ಮಣಿಪುರ, ಬಿಹಾರ) ಮಾರ್ಚ್ 27: ಹೋಳಿ (ಬಿಹಾರ) ಮಾರ್ಚ್ 29: ಗುಡ್ ಫ್ರೈಡೇ (ತ್ರಿಪುರ, ಅಸ್ಸಾಂ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ) ಮಾರ್ಚ್ 31: ಭಾನುವಾರ

Comments (0)
Add Comment