ಮಾರ್ಚ್ ತಿಂಗಳ ಪಡಿತರ ಜೊತೆಗೆ ಖಾತೆಗೆ ಹಣ ಜಮಾ, ಈ ರೀತಿ ಖಾತೆ ಚೆಕ್ ಮಾಡಿ

ಮಾರ್ಚ್ ತಿಂಗಳ ಪಡಿತರ ಜೊತೆಗೆ ಖಾತೆಗೆ ಹಣ ಜಮಾ
ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಮಾಸಿಕ ತಲಾ 170 ರೂಪಾಯಿ ಗಳನ್ನೂ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮಾಸಿಕವಾಗಿ ಸರ್ಕಾರ DBT ಮೂಲಕ ಜಮಾ ಮಾಡುತ್ತಿದೆ. ಸದ್ಯ ಮಾರ್ಚ್ ತಿಂಗಳ ಹಣದ ಬಿಡುಗಡೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಮಾರ್ಚ್ ತಿಂಗಳಿಗೆ ಅನ್ವಯವಾಗುವಂತೆ ಪಡಿತರನ್ನು ಬಿಡುಗಡೆ ಮಾಡಲಾಗಿದೆ. ಪಡಿತರ ವಿತರಣೆಯ ಜೊತೆಗೆ ಅರ್ಹರ ಹೆಚ್ಚುವರಿ ಅಕ್ಕಿಯ ಹಣವನ್ನು ಕೂಡ ಸರ್ಕಾರ ಜಮಾ ಮಾಡಿದೆ. ಇನ್ನು ನೀವು ಮಾರ್ಚ್ ತಿಂಗಳ ಅಕ್ಕಿಯ ಹಣ ನಿಮ್ಮ ಖಾತೆಗೆ ಬಂದಿದೆಯೇ ಎಂದು ತಿಳಿಯಲು ಈ ಕೆಳಗಿನ ಹಂತವನ್ನು ಅನುಸರಿಸಬಹುದು.

ಅನ್ನ ಭಾಗ್ಯ ಹಣ ಖಾತೆಗೆ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ
•ಕರ್ನಾಟಕ ಸರ್ಕಾರದ ಅಧಿಕೃತ Website https://www.karnataka.gov.in/ ಗೆ ಭೇಟಿ ನೀಡಿ.

•E -Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ

•DBT Status ಲಿಂಕ್ ಅನ್ನು ಕ್ಲಿಕ್ ಮಾಡಿ

•ನೀವು ರೇಷನ್ ಕಾರ್ಡ್ ನಲ್ಲಿ ಯಾವ ಸಮಯದ ಸ್ಟೇಟಸ್ ತಿಳಿಯಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ.

•ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ನಂತರ Continue ಬಟನ್ ಕ್ಲಿಕ್ ಮಾಡಿ.

•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅನ್ನ ಭಾಗ್ಯ ಯೋಜನೆಯಡಿ ನಿಮಗೆ ಯಾವ ಯಾವ ಕಂತುಗಳ ಹಣ ಜಮಾ ಆಗಿದೆ ಎನ್ನುವುದು ಸ್ಕ್ರೀನ್ ಮೇಲೆ ತೋರುತ್ತದೆ.

 

Comments (0)
Add Comment