‘ಮಾ.17ಕ್ಕೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ’- ಶ್ರೀನಿವಾಸ್ ಪ್ರಸಾದ್

ಮೈಸೂರು: ಮಾರ್ಚ್ 17ಕ್ಕೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತೇನೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಹಿರಂಗ ಪ್ರಚಾರಕ್ಕೂ ಹೋಗುವುದಿಲ್ಲ. ಆದರೆ ಬಿಜೆಪಿಯನ್ನು ಬೆಂಬಲಿಸುವಂತೆ ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ. ಹಾಗೂ ಶೀಘ್ರದಲ್ಲೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದರು.

ನನಗೆ ನನ್ನ ಅಳಿಯ ಡಾ.ಮೋಹನ್ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ತಿಳಿದಿತ್ತು. ಆದರೀಗ ಹರ್ಷವರ್ಧನ್ ಕೂಡ ಆಕಾಂಕ್ಷಿ ಎಂದು ಗೊತ್ತಾಗಿದೆ. ಈಗ ನಮ್ಮ ಮನೆಯಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅವರಿಬ್ಬರೂ ತುಂಬಾ ಅನ್ಯೋನ್ಯವಾಗಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಹೊಂದಾಣಿಕೆ ಇಂದ ಕೆಲಸ ಮಾಡ್ತಾರೆ. ಈ ಬಗ್ಗೆ ನನ್ನ ಅಭಿಪ್ರಾಯವನ್ನ ಬಿ.ವೈ ವಿಜಯೇಂದ್ರ ಅವರಿಗೆ ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಇನ್ನು ಸಿಎಂ ಸಿದ್ಧರಾಮಯ್ಯ ಅವರು ಬಾವಿಯೊಳಗಿನ ಕಪ್ಪೆ ಇದ್ದಂತೆ. ಪ್ರಧಾನಿ ಮೋದಿ ಅವರು ಸಮುದ್ರದಲ್ಲಿ ಈಜಿರುವ ನಾಯಕ. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಮೋದಿ ಅವರಿಗೆ ಹೋಲಿಸಬೇಡಿ. ಸಿದ್ದರಾಮಯ್ಯ ಬಾಯಿಗೆ ಬಂದಂತೆ ಕಿರುಚುವುದನ್ನು ಕಲಿತಿದ್ದಾನೆ. ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಗೆ ಏನು ವ್ಯತ್ಯಾಸವಿದೆ ಹೇಳಿ? ಇಬ್ಬರೂ ಸಹ ಸುಮ್ಮನೆ ಕಿರುಚುತ್ತಾರೆ ಎಂದರು.

Comments (0)
Add Comment