ಮಾ.31 ಭಾನುವಾರ ಬ್ಯಾಂಕ್​​ಗಳಿಗೆ ರಜೆ ರದ್ದು

ನವದೆಹಲಿ: ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳೂ ಹಣಕಾಸು ವರ್ಷದ ಕೊನೆ ದಿನವಾದ ಮಾರ್ಚ್ 31, ಭಾನುವಾರದಂದು ತೆರೆದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನ ನೀಡಿದೆ.

2023-24ರ ಹಣಕಾಸು ವರ್ಷದಲ್ಲಿಯೇ ರಸೀದಿಗಳು ಮತ್ತು ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಲೆಕ್ಕಹಾಕಲು ಮಾರ್ಚ್ 31, 2024 ರಂದು (ಭಾನುವಾರ) ಸರ್ಕಾರಿ ರಸೀದಿಗಳು ಮತ್ತು ಪಾವತಿಗಳೊಂದಿಗೆ ವ್ಯವಹರಿಸುವ ಬ್ಯಾಂಕುಗಳ ಎಲ್ಲಾ ಶಾಖೆಗಳನ್ನು ವಹಿವಾಟುಗಳಿಗೆ ಮುಕ್ತವಾಗಿಡಲು ಭಾರತ ಸರ್ಕಾರ ವಿನಂತಿಸಿದೆ.

ಹೀಗಾಗಿ ಈ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ಭಾನುವಾರ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾ ದಿನವಾದರೂ ಅಂದು ತೆರೆದಿರಬೇಕಾಗುತ್ತದೆ.

Comments (0)
Add Comment