ಮಿಜೋರಾಂ ಚುನಾವಣಾ ಫಲಿತಾಂಶ – ಗೆಲುವಿನ ಖಾತೆ ತೆರೆದ ಝಡ್‌ಪಿಎಂ, ಸಿಎಂ ಡಿಸಿಎಂಗೆ ಹಿನ್ನಡೆ

ಬಹುನಿರೀಕ್ಷೆಯ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ನ.30ಕ್ಕೆ ಪೂರ್ಣಗೊಂಡಿದ್ದು, ನಿನ್ನೆ ಭಾನುವಾರ ಡಿಸೆಂಬರ್ 3 ರಂದು ನಾಲ್ಕು ರಾಜ್ಯಗಳ ಅಧಿಕೃತ ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಮಿಜೋರಾಂ ರಾಜ್ಯದ ಮತ ಎಣಿಕೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಮತ ಏಣಿಕೆ ಆರಂಭವಾಗಿದ್ದು, ಈಶಾನ್ಯ ರಾಜ್ಯದ ಫಲಿತಾಂಶ ಪ್ರಕಟವಾಗಲಿದೆ. ಗೆಲುವಿನ ಖಾತೆ ತೆರೆದ ಝಡ್‌ಪಿಎಂ ಗೆಲುವಿನತ್ತ ದಾಪುಗಾಲು ಇಟ್ಟಿದೆ. 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ 27 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಎಂಎನ್‌ಎಫ್‌ 7 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದರೆ, ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು, ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಸ್ಪಷ್ಟ ಬಹುಮತದತ್ತ ಝಡ್‌ಪಿಎಂ ದಾಪುಗಾಲು ಇಟ್ಟಿದೆ. ಇನ್ನು, ಹಾಲಿ ಸಿಎಂ, ಡಿಸಿಎಂಗೆ ಹಿನ್ನಡೆಯಾಗಿದೆ.

Comments (0)
Add Comment