ಮುಂಬೈ ವನಿತಾ ಪ್ರೀಮಿಯರ್ ಲೀಗ್ ನಲ್ಲಿ ಕಶ್ವಿ ಗೌತಮ್ 2 ಕೋಟಿಗೆ ಹರಾಜು

ಮುಂಬೈ:ಮುಂಬೈನಲ್ಲಿ ಮುಂಬೈ ವನಿತಾ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಕಾರ್ಯ ನಡಿತಾ ಇದೆ.ಇದರಲ್ಲಿ 20ರ ಹರೆಯದ ಅಲ್ ರೌಂಡರ್‍ ಆಟಗಾರ್ತಿಯಾಗಿರುವ ಕಶ್ವಿ ಗೌತಮ್ ಅವರು ಈ ಬಾರಿಯ ಡಬ್ಲ್ಯೂಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಹಣ ಪಡೆದ ದಾಖಲೆ ಬರೆದಿದ್ದಾರೆ.

ಗುಜರಾತ್ ಜೈಂಟ್ಸ್ ತಂಡವು ಕಶ್ವಿ ಗೌತಮ್ ಅವರನ್ನು ಬರೋಬ್ಬರಿ ಎರಡು ಕೋಟಿ ರೂ ನೀಡಿ ಹರಾಜಿನಲ್ಲಿ ಖರೀದಿಸಿದೆ.

ಅಂದ್ರೆ ಅವರು ಬರೋಬ್ಬರಿ ಈ ಬಾರಿಯ ಹರಾಜಿನಲ್ಲಿ 2 ಕೋಟಿ ರೂ.ಪಡೆದುಕೊಂಡಿದ್ದಾರೆ.ಕಳೆದ ವರ್ಷದ ಡಬ್ಲ್ಯೂಪಿಎಲ್ ಹರಾಜಿನಲ್ಲಿ ಕಶ್ವಿ ಅವರು ಅನ್ ಸೋಲ್ಡ್ ಆಗಿದ್ದರು.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಎ ಸರಣಿಯಲ್ಲಿ ಕಶ್ವಿ ಗೌತಮ್ ಭಾಗವಹಿಸಿದ್ದರು.

ಅವರು ಭಾರತ ಎ ಪರ ಎರಡು ಪಂದ್ಯಗಳನ್ನು ಆಡಿ ಮೂರು ವಿಕೆಟ್ ಪಡೆದರು.

ಮಹಿಳಾ ಸೀನಿಯರ್ ಟಿ20 ಟ್ರೋಫಿ 2023 ರಲ್ಲಿ ಪ್ರತಿ ಓವರ್ಗೆ 4.14 ರನ್ಗಳ ಎಕಾನಮಿ ದರದಲ್ಲಿ ಏಳು ಪಂದ್ಯಗಳಲ್ಲಿ 12 ವಿಕೆಟ್ ಗಳನ್ನು ಕಬಳಿಸಿದರು.ಅಲ್ಲದೆ ಅವರು ಹಾಂಗ್ ಕಾಂಗ್ ಎಸಿಸಿ ಎಮರ್ಜಿಂಗ್ ಟೂರ್ನಮೆಂಟ್ ನಲ್ಲಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು.

ಫಾಸ್ಟ್ ಬೌಲಿಂಗ್ ಆಲ್ ರೌಂಡರ್ ಆಗಿರುವ ಕಶ್ವಿ ಗೌತಮ್ ಅವರು ವನಿತಾ ಕ್ರಿಕೆಟ್ ನಲ್ಲಿ ದಾಖಲೆ ಮಾಡಿದ ಆಟಗಾರ್ತಿ. ಚಂಡೀಗಢ ತಂಡದ ಪರವಾಗಿ ವನಿತಾ ಅಂಡರ್ 19 ಕೂಟದಲ್ಲಿ ಕಶ್ವಿ ಅರುಣಾಚಲ ಪ್ರದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು.

ಇತ್ತ ಸತರ್ ಲ್ಯಾಂಡ್, ಶಬ್ನಿಮ್ ಇಸ್ಮಾಯಿಲ್, ವೃಂದಾ ದಿನೇಶ್ ಮುಂತಾದವರು ಕೋಟಿ ಹಣ ಪಡೆದು ಮಿಂಚಿದ್ದಾರೆ.

Comments (0)
Add Comment