ಮೂರನೇ ದಿನಕ್ಕೆ ಕಾಲಿಟ್ಟ ರೈತರ ಚಳವಳಿ

ನವದೆಹಲಿ:  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಚಳಿವಳಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ ಎರಡು ದಿನಗಳಿಂದ ರೈತರ ಪ್ರತಿಭಟನೆ ಹಿನ್ನೆಲೆ ದೆಹಲಿ ಸೇರಿದಂತೆ ಪಂಜಾಬ್, ಹರ್ಯಾಣ ಸಾಕಷ್ಟು ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಂದು ರೈತರು ಪಂಜಾಬ್​ನಲ್ಲಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಲಿದ್ದಾರೆ.

ಮಂಗಳವಾರ ರೈತರ ಚಳವಳಿಯಿಂದಾಗಿ ಪೊಲೀಸರು ಹಾಗೂ ರೈತರ ನಡುವೆ ಘರ್ಷಣೆ ಏರ್ಪಟ್ಟಿತ್ತು. ರೈತರನ್ನು ದೆಹಲಿಗೆ ಪ್ರವೇಶಿಸದಂತೆ ತಡೆಯಲು ಪೊಲೀಸರು ಡ್ರೋನ್ ಮೂಲಕ ಅಶ್ರುವಾಯು ಶೆಲ್​ಗಳನ್ನು ಸಿಡಿಸಿದ್ದರು.

ಇಂದು ಪಂಜಾಬ್ ರೈತ ಸಂಘಟನೆಗಳು ರೈಲು ತಡೆಯಲು ನಿರ್ಧರಿಸಿವೆ.

ರೈತರು ದೆಹಲಿಗೆ ಬರುವುದನ್ನು ತಡೆಯಲು ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಟಿಕ್ರಿ, ಸಿಂಗು ಮತ್ತು ಝರೋಡಾ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

ರೈತರ ಬೇಡಿಕೆಗಳೇನು? ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸುವುದು ರೈತರ ಬಹುಮುಖ್ಯ ಬೇಡಿಕೆಯಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಭಾರತವನ್ನು ಡಬ್ಲ್ಯೂಟಿಒದಿಂದ ಹೊರತೆಗೆಯಬೇಕು, ಕೃಷಿ ಸರಕುಗಳು, ಹಾಲು ಉತ್ಪನ್ನಗಳು, ಹಣ್ಣುಗಳು,ತರಕಾರಿಗಳು ಮತ್ತು ಮಾಂಸದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಭತ್ಯೆ ಹೆಚ್ಚಿಸಬೇಕು, 58 ವರ್ಷ ಮೇಲ್ಪಟ್ಟ ರೈತರು ಮತ್ತು ಕೃಷಿ ಕೂಲಿಕಾರರಿಗೆ ಪಿಂಚಣಿ ಯೋಜನೆ ಜಾರಿಗೊಳಿಸಿ ಮಾಸಿಕ 10 ಸಾವಿರದವರೆಗೆ ಪಿಂಚಣಿ ನೀಡಬೇಕು, ಕೀಟನಾಶಕಗಳು, ಬೀಜಗಳು ಮತ್ತು ರಸಗೊಬ್ಬರ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಹತ್ತಿ ಸೇರಿದಂತೆ ಎಲ್ಲಾ ಬೆಳಗಳ ಬೀಜಗಳ ಗುಣಮಟ್ಟ ಸುಧಾರಿಸಬೇಕು.

Comments (0)
Add Comment