ಮೆಕ್ಸಿಕೊದಲ್ಲಿ ಏಲಿಯನ್ಸ್ ಗಳ ಪಳೆಯುಳಿಕೆ ಪ್ರದರ್ಶನ – ಏನಿದು ಕೌತುಕದ ಸುದ್ದಿ?

 ಅನ್ಯಗ್ರಹಗಳಲ್ಲಿ ಮನುಷ್ಯನನ್ನು ಹೋಲುವ ಜೀವ ಇದೆಯೇ ಎನ್ನುವ ಕುರಿತು ಸಂಶೋಧನೆಗಳು ಇನ್ನು ನಡೆಯುತ್ತಲೇ ಇದೆ. ಈ ನಡುವೆ ಮೆಕ್ಸಿಕೋ ಸಂಸತ್ ಈಗ ವಿಶ್ವದ ಗಮನ ಸೆಳೆದಿದೆ.

ಮೆಕ್ಸಿಕನ್ ಸಂಸತ್ ನಲ್ಲಿ ವಿಚಿತ್ರ ಜೀವಿಯ ಮಮ್ಮಿ ರೂಪದ ಪಳೆಯುಳಿಕೆಗಳನ್ನು ಪ್ರದರ್ಶಿಸಲಾಗಿದೆ.

ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿರುವ ಈ ಜೀವಿಗಳ ಪಳೆಯುಳಿಕೆಗಳನ್ನು ಗಾಜಿನ ಡಬ್ಬಿಯಲ್ಲಿ ಮೆಕ್ಸಿಕೋ ಸರ್ಕಾರದ ನಾಯಕರ ಮುಂದೆ ಪ್ರದರ್ಶಿಸಲಾಯಿತು.

ಪತ್ರಕರ್ತೆ ಹಾಗೂ ಯೂಫಾಲಾಜಿಸ್ಟ್ ಜೈಮಿ ಮುಸ್ಸಾನ್ ಈ ಪಳೆಯುಳಿಕೆಗಳನ್ನು ಪ್ರದರ್ಶಿಸಿದರು.

ಈ ಏಲಿಯನ್ ರೂಪದ ಪಳೆಯುಳಿಕೆಗಳು ಕುಸ್ಕೋ ಮತ್ತು ಪೇರು ಪ್ರದೇಶದಲ್ಲಿ ದೊರೆತಿದ್ದು, ಇವುಗಳ ಡಿಎನ್ಎ ಪರೀಕ್ಷೆಯನ್ನೂ ನಡೆಸಲಾಗಿದೆ. ಮೆಕ್ಸಿಕೋ ಆಟೊನೊಮಸ್ ಯುನಿವರ್ಸಿಟಿ ವಿಜ್ಞಾನಿಗಳು ಈ ಪರೀಕ್ಷೆ ನಡೆಸಿ, ಈ ಜೀವಿ ನಮ್ಮ ಭೂಮಿಯ ವಿಕಾಸ ಸಿದ್ದಾಂತದ ಭಾಗವಲ್ಲ. ಇದು ಮಾನವರ ಪ್ರಭೇದಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇವುಗಳ ಡಿಎನ್ಎ ಯನ್ನು ಬೇರೆಬೇರೆ ಡಿಎನ್ಎ ಗಳೊಂದಿಗೆ ಹೋಲಿಸಲಾಯಿತು. ಶೇ. 30ರಷ್ಟು ಡಿಎನ್ಎ ಯಾವುದೇ ಜೀವಿಯೊಂದಿಗೆ ಹೋಲಿಕೆಯೇ ಆಗುತ್ತಿಲ್ಲ ಎಂದು ಮುಸ್ಸಾನ್ ತಿಳಿಸಿದ್ದಾರೆ.

ಪಳೆಯುಳಿಕೆಯಾಗಿರುವ ಈ ವಿಚಿತ್ರ ಜೀವಿಗಳ ದೇಹಗಳು ಆಲ್ಗೆ ಅಂದರೆ ಪಾಚಿಯ ಗಣಿಗಳ ಬಳಿ ಸಿಕ್ಕಿದೆ ಎಂದು ಮಾಹಿತಿ ನೀಡಿರುವ ವಿಜ್ಞಾನಿಗಳು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದಾಗಿ ತಿಳಿಸಿದ್ದಾರೆ.

Comments (0)
Add Comment