ಮೆಫ್ಟಾಲ್ ಔಷಧದ ಬಳಕೆ ಬಗ್ಗೆ ಇರಲಿ ಎಚ್ಚರಿಕೆ

ನವದೆಹಲಿ:  ಸಾಮಾನ್ಯವಾಗಿ ಬಳಸುವ ನೋವು ನಿವಾರಕ ಔಷಧ ಮೆಫ್ಟಾಲ್ ನ ವಿವೇಚನಾ ರಹಿತ ಬಳಕೆಯಿಂದ ದೇಹದ ಆಂತರಿಕ ಅಂಗಗಳಿಗೆ ಹಾನಿ ಉಂಟಾಗುವ ಸಂಭವವಿದೆ ಎಂದು ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ ಎಚ್ಚರಿಕೆ ನೀಡಿದೆ.

ಇದರಲ್ಲಿ ಬಳಸಾಗುವ ಮೆಫೆನಾಮಿಕ್ ಆಮ್ಲದಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಮತ್ತು ರೋಗಿಗಳಿಗೆ ಅದು ಮುನ್ನೆಚ್ಚರಿಕೆಯ ಸಂದೇಶ ರವಾನಿಸಿದೆ.

ಈ ಮೆಫ್ಟಾಲ್ ಮಾತ್ರೆಯನ್ನು ಬಳಸುವುದರಿಂದ ನಮ್ಮ ದೇಹದ ಅಂಗಾಂಗಗಳಿಗೆ ಹಾನಿ ಉಂಟಾಗುವ ಸಂಭವ ಹೆಚ್ಚಿದೆ. ಅಷ್ಟೇ ಅಲ್ಲದೇ ಕೆಲವರಿಗೆ ಮಾತ್ರೆ ಸೇವಿಸಿದ ನಂತರ ಚರ್ಮದ ದದ್ದು, ಆಂತರಿಕ ಅಂಗಗಳಿಗೆ ಹಾನಿ, ಮಾರಣಾಂತಿಕ ಅಲರ್ಜಿ ಕಾಣಿಸಿಕೊಳ್ಳುವುದು ಕಂಡು ಬಂದಿದೆ ಎಂದು ಫಾರ್ಮಾಕೋವಿಜಿಲೆನ್ಸ್ ವರದಿ ಮಾಹಿತಿ ನೀಡಿದೆ.

ಡ್ರೆಸ್ ಸಿಂಡ್ರೋಮ್ ಎನ್ನುವುದು ಗಂಭೀರ ಅಲರ್ಜಿ ಆಗಿದ್ದು. ಇದರಲ್ಲಿ ಮಾರಣಾಂತಿಕವಾಗುವ ಸಾಧ್ಯತೆಯೂ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ದೇಶದಲ್ಲಿ ಸುಮಾರು ಶೇ. 10ರಷ್ಟು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಔಷಧಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಈ ಮಾತ್ರೆಗಳನ್ನು ಸೇವಿಸಿ ಆರೋಗ್ಯದಲ್ಲಿ ಏರುಪೇರುಗಳು ಲಕ್ಷಣ ಕಂಡುಬಂದರೆ, ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್‌ಗೆ ವರದಿ ಮಾಡಿʼʼ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ

Comments (0)
Add Comment