ಮೇವು ಶೇಖರಣೆಗೆ ರೈತರಲ್ಲಿ ಮನವಿ: ಜಿಲ್ಲಾಧಿಕಾರಿ.ಡಾ.ವೆಂಕಟೇಶ್.ಎಂ.ವಿ

 

ದಾವಣಗೆರೆ: ಈ ವರ್ಷ ಮಳೆ ಕೊರತೆಯಿಂದ ದಾವಣಗೆರೆ ಜಿಲ್ಲೆಯ 6 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಗಳಿದ್ದು, ಭತ್ತ, ಮೆಕ್ಕೆಜೋಳ ಮತ್ತು ಇತರೆ ಬೆಳೆಗಳ ಕಟಾವು ಮಾಡುವ ವೇಳೆ ಮೇವು ಮೇವು ಹಾಳಾಗದಂತೆ ಶೇಖರಣೆ ಮಾಡಿಟ್ಟುಕೊಳ್ಳಲು ಜಿಲ್ಲೆಯಲ್ಲಿ ಕ್ರಮವಹಿಸುವಂತೆ ರೈತರಿಗೆ ಜಿಲ್ಲಾಧಿಕಾರಿ.ಡಾ.ವೆಂಕಟೇಶ್.ಎಂ.ವಿ ಮನವಿ ಮಾಡಿದ್ದಾರೆ.

ವಾಡಿಕೆ ಮಳೆಗಿಂತ ತೀವ್ರತರ ಕಡಿಮೆ ಮಳೆಯಾಗಿ ಬರ ಉಂಟಾಗಿದೆ. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ಪ್ರಮುಖ ವಿಷಯವಾಗಿದೆ. ರೈತರು ತಮ್ಮ ಜಮೀನಿಲ್ಲಿರುವ ಯಾವುದೇ ತರಹದ ಮೇವನ್ನು ಸುಟ್ಟು ಹಾಕದೇ ಬಣವೆ ಹಾಕಿ ಶೇಖರಿಸಬೇಕು.

ಮೇವನ್ನು ಒಣಗಿಸಿ ಹುಲ್ಲು ಹಾಳಾಗದಂತೆ ಶೇಖರಣೆ ಮಾಡುವುದು. ಬೇಲಿಂಗ್ ಯಂತ್ರಗಳಿಂದ ಭತ್ತದ ಹುಲ್ಲು ಸುರುಳಿ ಕಟ್ಟಿ ಶೇಖರಿಸಿಟ್ಟುಕೊಳ್ಳಬೇಕು.

ಅವಶ್ಯಕ ಸಂದರ್ಭದಲ್ಲಿ ರೈತರು ಸರ್ಕಾರಕ್ಕೆ ಮೇವನ್ನು ಮಾರಾಟ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಮೇವು ಶೇಖರಣೆಗೆ ರೈತರಲ್ಲಿ ಮನವಿ: ಜಿಲ್ಲಾಧಿಕಾರಿ.ಡಾ.ವೆಂಕಟೇಶ್.ಎಂ.ವಿ
Comments (0)
Add Comment