ಮೈಗ್ರೇನ್ ಸಮಸ್ಯೆಗೆ ನಾವು ಹೇಳೋ ಈ ಟಿಪ್ಸ್ ಫಾಲೋ ಮಾಡಿ

ತಲೆನೋವು ಪ್ರತಿಯೊಬ್ಬ ಮನುಷ್ಯನಿಗೂ ಬರುವ ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ ಕೆಲವರಿಗೆ ಮಾತ್ರ ತಲೆನೋವು ಮೈಗ್ರೇನ್‌ ಆಗಿ ಕಾಡುವುದರ ಜೊತೆಗೆ ಜೀವನವನ್ನು ತುಂಬಾ ನೀರಸವನ್ನಾಗಿಸುತ್ತದೆ. ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಈ ಮೈಗ್ರೇನ್  ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಆದರೆ ನಾವು ಕೊಡುವ ಈ  ಕೆಲವು ಸಿಂಪಲ್ ಸಲಹೆಗಳೊಂದಿಗೆ ನೀವು ತಲೆ ನೋವಿನಿಂದ ಮುಕ್ತಿ ಪಡೆಯಬಹುದು.

ನೀರು:

ನಿರ್ಜಲೀಕರಣವು ಕೆಲವು ಜನರಲ್ಲಿ ಮೈಗ್ರೇನ್ ಅನ್ನು ಪ್ರಚೋದಿಸಬಹುದು. ಹೀಗಾಗಿ ಮೈಗ್ರೇನ್ ಸಮಸ್ಯೆ ಇರುವವರು ಸಾಕಷ್ಟ ನೀರು ಕುಡಿಯಬೇಕು.

ಮಸಾಜ್

ಒತ್ತಡ ಮತ್ತು ಮೈಗ್ರೇನ್ ನೋವನ್ನು ನಿವಾರಿಸಲು ಕುತ್ತಿಗೆ ಮತ್ತು ಭುಜದ ಸ್ನಾಯುಗಳನ್ನು ಮಸಾಜ್ ಮಾಡಬಹುದು. ಇದು ನಿಮಗೆ ಒತ್ತಡವನ್ನು ನಿವಾರಿಸಿ ವಿಶ್ರಾಂತಿಯನ್ನು ನೀಡುತ್ತದೆ. ಮಸಾಜ್‌ ಪೂರ್ಣಪ್ರಮಾಣದಲ್ಲಿ ಅಲ್ಲವಾದರೂ ಮೈಗ್ರೇನ್‌ನಿಂದ ಕೆಲ ಕಾಲ ರಿಲೀಫ್‌ ನೀಡುತ್ತೆ.

ಆಹಾರ

ತಲೆನೋವು ಸುಲಭವಾಗಿ ನಿಯಂತ್ರಣಕ್ಕೆ ಬರುವುದಿಲ್ಲ. ಆ ಸಮಯದಲ್ಲಿ ಸಂಸ್ಕರಿಸಿದ ಆಹಾರ ಮತ್ತು ಕ್ಯಾನ್ಡ್‌ ಫೂಡ್‌, ಉಪ್ಪಿನಕಾಯಿ ಆಹಾರವನ್ನು ಸೇವಿಸಬಾರದು. ವೇಗವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಮೈಗ್ರೇನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಲ್ಯಾವೆಂಡರ್ ಎಣ್ಣೆ:

ಲ್ಯಾವೆಂಡರ್ ಸಾರಭೂತ ತೈಲವನ್ನು ಉಸಿರಾಡುವುದರಿಂದ ಮೈಗ್ರೇನ್‌ನಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡಬಹುದು. ಮೈಗ್ರೇನ್ ಬಂದಾಗ ತಕ್ಷಣ ಲ್ಯಾವೆಂಡರ್ ಎಣ್ಣೆಯ ವಾಸನೆಯನ್ನು ಅನುಭವಿಸಬಹುದು ಅಥವಾ ಲ್ಯಾವೆಂಡರ್ ಫ್ಲೇವರ್ ಇರುವ ರೂಮ್ ಫ್ರೆಶ್ನರ್ ಬಳಸಬಹುದು.

ಯೋಗ

ಯೋಗ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನವು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಮೈಗ್ರೇನ್ ನೋವಿಗೆ ಯೋಗವು ಪ್ರಯೋಜನಕಾರಿ ಎಂದು ಕೆಲವೊಂದು ಸಂಶೋಧನೆ ತೋರಿಸಿವೆ. ಈ ಸಣ್ಣ ಪರಿಹಾರಗಳು ತಲೆನೋವಿನ ತೀವ್ರತೆಯನ್ನು ಕಡಿಮೆ ಮಾಡಬಹುದು.

 

Comments (0)
Add Comment