‘ಮೈಚಾಂಗ್’ ಚಂಡಮಾರುತ ಎಫೆಕ್ಟ್ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ!

 

ಬೆಂಗಳೂರು: ‘ಮೈಚಾಂಗ್’ ಚಂಡಮಾರುತದ ಪರಿಣಾಮದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ  ಡಿ.9ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉಡುಪಿ, ಉ.ಕನ್ನಡ, ದ.ಕನ್ನಡ, ಕಲಬುರ್ಗಿ, ಯಾದಗಿರಿ, ಬೀದ‌ರ್, ಬೆಂಗಳೂರು, ಮೈಸೂರು, ಚಾಮರಾಜನಗರ, ಬೆಳಗಾವಿ, ಕೊಡಗು ಸೇರಿ ಇತರ ಪ್ರದೇಶಗಳಲ್ಲೂ ಮಳೆ ಸುರಿಯಲಿದೆ ಎಂದು ತಿಳಿಸಿದೆ. ಅಲ್ಲದೆ, ಡಿ.9ರವರೆಗೆ ರಾಜ್ಯಾದ್ಯಂತ ಚಳಿ ವಾತಾವರಣ ಇರಲಿದ್ದು, ಬೆಚ್ಚನೆಯ ವಾತಾವರಣ ಕಾಪಾಡಿಕೊಳ್ಳಲು ಅದು ಸೂಚಿಸಿದೆ. ಬೆಂಗಳೂರಿನಲ್ಲಿ ಸದ್ಯ ಮೋಡ ಕವಿದ ವಾತಾವರಣವಿದೆ.

'ಮೈಚಾಂಗ್' ಚಂಡಮಾರುತ ಎಫೆಕ್ಟ್ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ!
Comments (0)
Add Comment