ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ

ದೇಹದಲ್ಲಿ ಮೇದೋಗ್ರಂಥಿಯ ಸ್ರಾವ ಅತಿಯಾದಾಗ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖ ಚರ್ಮದ ಅಂದವನ್ನು ಕೆಡಿಸುತ್ತದೆ. ಇಂತಹ ಮೊಡವೆಗಳನ್ನು ನಿವಾರಿಸಲು ರೋಸ್ ವಾಟರ್ ಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ. *ಮೊಡವೆ ನಿವಾರಿಸಲು 1 ಚಮಚ ರೋಸ್ ವಾಟರ್ ಗೆ 2 ಚಮಚ ಶ್ರೀಗಂಧದ ಪುಡಿಯನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ. ಸೂಕ್ಷ್ಮ ಚರ್ಮ ಹೊಂದಿರುವವರು ಈ ರೀತಿಯಲ್ಲಿ ಚರ್ಮದ ಆರೈಕೆ ಮಾಡಿ *2 ಚಮಚ ಸೌತೆಕಾಯಿ ಪೇಸ್ಟ್ ಗೆ 2 ಚಮಚ ಜೇನುತುಪ್ಪ, 2 ಚಮಚ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಈ ಮೂರು ಪದಾರ್ಥಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಮೊಡವೆ ಸಮಸ್ಯೆಯಿಂದ ಕಾಪಾಡುತ್ತವೆ.

Comments (0)
Add Comment