ಮೊರಾಕ್ಕೊ ನಗರದಲ್ಲಿ ಪ್ರಬಲ ಭೂಕಂಪ: 2 ಸಾವಿರಕ್ಕೂ ಹೆಚ್ಚು ಜನ ಸಾವು

ವಾಷಿಂಗ್ಟನ್: ಉತ್ತರ ಆಫ್ರಿಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಇಲ್ಲಿಯವರೆಗೆ 2,000 ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಈ ಬಗ್ಗೆ ಮಾಹಿತಿ ನೀಡಿದೆ. ಶುಕ್ರವಾರ ರಾತ್ರಿ 11:11 ಗಂಟೆಗೆ (2211 GMT) ಪ್ರವಾಸಿ ಹಾಟ್‌ಸ್ಪಾಟ್‌ನ ನೈರುತ್ಯಕ್ಕೆ 72 ಕಿಲೋಮೀಟರ್ (45 ಮೈಲಿ) ಪರ್ವತ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. 1,404 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ನೆಲಸಮವಾಗಿವೆ. ಕಟ್ಟಡಗಳ ಅವಶೇಷದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಇನ್ನು ಮೊರಾಕ್ಕೊದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

Comments (0)
Add Comment