ಮ್ಯಾಚ್ ಫಿಕ್ಸಿಂಗ್‌ ಆರೋಪ; ಬಿಪಿಎಲ್​ನಿಂದ ಶೋಯೆಬ್ ಮಲಿಕ್ ಹೊರಕ್ಕೆ?

ಪಾಕಿಸ್ತಾನ: ಪಾಕಿಸ್ತಾನದ ಮಾಜಿ ನಾಯಕ ಮತ್ತು ಅನುಭವಿ ಆಲ್‌ರೌಂಡರ್ ಶೋಯೆಬ್ ಮಲಿಕ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಅವರನ್ನು ತಂಡದಿಂದ ಹೊರಹಾಕಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL)ನ 2024ರ ಋತುವಿನಲ್ಲಿ ಇನ್ನು ಮುಂದೆ ಆಡುವುದಿಲ್ಲ ಎಂದು ತಿಳಿದುಬಂದಿದೆ. ಮಲಿಕ್ ವೈಯಕ್ತಿಕ ಕಾರಣಗಳಿಗಾಗಿ ದುಬೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆಯಾದರೂ, ಬಾಂಗ್ಲಾದೇಶದ ಮಾಧ್ಯಮಗಳಲ್ಲಿನ ವರದಿಗಳು ವಿಭಿನ್ನ ನಿರೂಪಣೆಯನ್ನು ಚಿತ್ರಿಸುತ್ತವೆ. ಫ್ರಾಂಚೈಸಿ ತಂಡ ಫಾರ್ಚೂನ್ ಬಾರಿಶಾಲ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಒಪ್ಪಂದವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಸಮಯದಲ್ಲಿ, ಅವರು ಖುಲ್ನಾ ಟೈಗರ್ಸ್ ವಿರುದ್ಧ ಒಂದೇ ಓವರ್‌ನಲ್ಲಿ ಮೂರು ನೋ ಬಾಲ್‌ಗಳನ್ನು ಎಸೆದರು ಮತ್ತು ಇದರಿಂದಾಗಿ, ಅವರ ವಿರುದ್ಧ ಫಿಕ್ಸಿಂಗ್ ಶಂಕೆ ವ್ಯಕ್ತವಾಗುತ್ತಿದೆ.

ಜನವರಿ 22 ರಂದು ಬಾರಿಶಾಲ್ ಮತ್ತು ಖುಲ್ನಾ ಟೈಗರ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು.ವೇಗದ ಬೌಲರ್​ಗಳೇ ಒಂದು ಓವರ್​ನಲ್ಲಿ ಮೂರು ನೋ ಬಾಲ್ ಎಸೆಯುವುದು ಅಪರೂಪವಾಗಿರುವಾಗ ಸ್ಪಿನ್ ಬೌಲರ್ ಆಗಿರುವ ಮಲಿಕ್ ಒಂದೇ ಓವರ್‌ನಲ್ಲಿ ಮೂರು ನೋ-ಬಾಲ್‌ಗಳನ್ನು ಮಾಡಿದ್ದರು.

Comments (0)
Add Comment