ಯಾವುದೇ ತರಬೇತಿ ಇಲ್ಲದೆ UPSC ಪರೀಕ್ಷೆ ಪಾಸಾದ ರೈತನ ಮಗ

ಬಿಹಾರ : ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಕಠಿಣವಾದ ಮತ್ತು ಸ್ಪರ್ಧಾತ್ಮಕ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಲು ತಯಾರಿ ಮಾಡಿಕೊಳ್ಳುತ್ತಾರೆ. ಹೀಗೆ ಈ ಪರೀಕ್ಷೆ ಬರೆದ ಅನೇಕ ಮಂದಿ ಅಭ್ಯರ್ಥಿಗಳಲ್ಲಿ ಕೆಲವರು ಮಾತ್ರ ಒಳ್ಳೆಯ ರ್‍ಯಾಂಕ್‌ ಪಡೆದು ಪರೀಕ್ಷೆಯನ್ನು ಪಾಸ್ ಮಾಡುತ್ತಾರೆ. ಇಲ್ಲಿಯೂ ಸಹ ಒಬ್ಬ ರೈತನ ಮಗ ಯಾವುದೇ ತರಬೇತಿ ಕೇಂದ್ರಕ್ಕೆ ಹೋಗದೆ. ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಅವರ ಯಶಸ್ಸಿನ ಕಥೆ ಇಲ್ಲಿದೆ.

ಬಿಹಾರದ ನಳಂದ ಜಿಲ್ಲೆಯ ಭಾಗನ್ ಬಿಘಾದಲ್ಲಿರುವ ಅಮರ್‌ಗಾಂವ್ ಗ್ರಾಮದವರಾದ ಉತ್ಕರ್ಷ್ ಗೌರವ್. ಬಿಹಾರದ ಉತ್ಕರ್ಷ್ ಅವರ ತಂದೆ ಕೃಷಿಕರಾಗಿದ್ದರೆ, ಅವರ ತಾಯಿ ಗೃಹಿಣಿಯಾಗಿದ್ದಾರೆ. ತಮ್ಮ 12ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಉತ್ಕರ್ಷ್‌ನ ತಂದೆ ಅವರು ಎಂಜಿನಿಯರ್ ಆಗಬೇಕೆಂದು ಬಯಸಿದ್ದರಂತೆ. ತನ್ನ ತಂದೆಯ ಆಸೆಯಂತೆ, ಉತ್ಕರ್ಷ್ ತಮ್ಮ ಎಂಜಿನಿಯರಿಂಗ್ ಅನ್ನು ಮುಂದುವರಿಸಲು ಬೆಂಗಳೂರಿಗೆ ಸ್ಥಳಾಂತರಗೊಂಡರು.

ಎಂಜಿನಿಯರಿಂಗ್ ಮುಗಿಸಿದ ನಂತರ ಸರ್ಕಾರಿ ನೌಕರಿಗಾಗಿ ತಯಾರಿ ಆರಂಭಿಸಲು ಮನಸ್ಸು ಮಾಡಿ ದೆಹಲಿಗೆ ತೆರಳಿದರು.

ಆದರೆ ಕಠಿಣ ಪರಿಶ್ರಮದ ನಡುವೆಯೂ ಯುಪಿಎಸ್ ಸಿ ಪರೀಕ್ಷೆಯಲ್ಲಿ ಸತತ ಮೂರು ವೈಫಲ್ಯಗಳನ್ನು ಎದುರಿಸಿದರು.

ನಂತರ, ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇದ್ದ ಕಾರಣ ಅವರು ತಮ್ಮ ಹಳ್ಳಿಗೆ ಹಿಂತಿರುಗಬೇಕಾಯಿತು. ಎಂಜಿನಿಯರಿಂಗ್ ಮುಗಿಸಿ ನಿರುದ್ಯೋಗಿಯಾಗಿದ್ದ ಅವರು ಗ್ರಾಮಸ್ಥರ ನಿಂದನೆಗಳನ್ನು ಸಹಿಸಬೇಕಾಯಿತು. ಆದರೆ ಅವರ ಕುಟುಂಬವು ಅವರನ್ನು ಕಷ್ಟಪಟ್ಟು ಓದಲು ಪ್ರೋತ್ಸಾಹಿಸಿತು. ಕೊನೆಗೆ ಅವರ ಪರಿಶ್ರಮಕ್ಕೆ 2022ರಲ್ಲಿ ಯುಪಿಎಸ್‌ ಸಿ ಸಿಎಸ್‌ ಇ ಪರೀಕ್ಷೆಯಲ್ಲಿ 709ನೇ ರ್‍ಯಾಂಕ್‌ ಪಡೆಯುವ ಮೂಲಕ ಯಶಸ್ಸುಗಿಟ್ಟಿಸಿಕೊಂಡರು.

ಉತ್ಕರ್ಷ್ ಅವರು ತಮ್ಮ ಪರೀಕ್ಷೆಯ ತಯಾರಿ ನಡೆಸಲು ಯೂಟ್ಯೂಬ್ ಅನ್ನು ಬಳಸುವ ಮೂಲಕ ಯಾವುದೇ ಕೊಂಚಿಂಗ್ ಇಲ್ಲದೆ ಕೂಡ ಸತತ ಪರಿಶ್ರಮದಿಂದ ಇಂತಹ ಕಠಿಣ ಪರೀಕ್ಷೆಗಳನ್ನು ಜಯಿಸಬಹುದು ಎಂದು ಅನೇಕ ಯುವ ಪೀಳಿಗೆಗಳಿಗೆ ಮಾದರಿಯಾಗಿದ್ದಾರೆ.

Comments (0)
Add Comment