ಯುಪಿಎಸ್‌ಸಿ ಪರೀಕ್ಷೆಯಲ್ಲಿ 849ನೇ ರ್‍ಯಾಂಕ್ ಪಡೆದ ಪಾಲಿಕೆಯಲ್ಲಿ ಕಸಗುಡಿಸುವ ಮಗ.!

 

ಥಾಣೆ: 32 ವರ್ಷದ ಪ್ರಶಾಂತ್ ಸುರೇಶ್ ಭೋಜನೆ ಈ ಸಾಧನೆ ಮಾಡಿದ್ದು, ಯುಪಿಎಸ್‌ಸಿ ಪರೀಕ್ಷೆ ಪಾಸ್ ಆಗಿದ್ದಾನೆ.

ಮಹಾರಾಷ್ಟ್ರದ ಥಾಣೆಯ ಪಾಲಿಕೆಯಲ್ಲಿ ಕಸ ಗುಡಿಸುವ ಪೌರ ಕಾರ್ಮಿಕ ಮಹಿಳೆಯ ಮಗ ಪ್ರಶಾಂತ್ ಸುರೇಶ್ ಭೋಜನೆ ಪಾಸಾಗಿರುವುದು. ಕುಟುಂಬದ ಎಲ್ಲ ಆರ್ಥಿಕ ಸಮಸ್ಯೆಗಳನ್ನು ಮೆಟ್ಟಿ ನಿಂತ ಪ್ರಶಾಂತ್ ಗುರಿ ಸಾಧಿಸಿದ್ದಾರೆ.

32 ವರ್ಷದ ಪ್ರಶಾಂತ್ ಸುರೇಶ್ ಭೋಜನೆ ಈ ಸಾಧನೆ ಮಾಡಿದ್ದು, ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವುದು ನನ್ನ ಕನಸಾಗಿತ್ತು ಎಂದು ಹೇಳಿದ್ದಾರೆ.

2015ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ಅವರು ಈಗ 9ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಥಾಣೆ ಪಾಲಿಕೆಯಲ್ಲಿ ತಾಯಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರೆ, ತಂದೆ ಡಿ ದರ್ಜೆ ನೌಕರರಾಗಿದ್ದಾರೆ.

 

ಯುಪಿಎಸ್‌ಸಿ ಪರೀಕ್ಷೆಯಲ್ಲಿ 849ನೇ ರ್‍ಯಾಂಕ್ ಪಡೆದ ಪಾಲಿಕೆಯಲ್ಲಿ ಕಸಗುಡಿಸುವ ಮಗ.!
Comments (0)
Add Comment