ರಶ್ಮಿಕ ಬಳಿಕ ಇದೀಗ ನಟಿ ಕತ್ರಿನಾ ಕೈಫ್ ಫೋಟೋ ಡೀಪ್ ಫೇಕ್ ವೈರಲ್‌

ಮುಂಬೈ: ಕಳೆದ ಕೆಲವು ದಿನಗಳಿಂದ ಸಿನಿಮಾರಂಗದಲ್ಲಿ ನಟಿಯರು ಡೀಪ್ ಫೇಕ್ ವಿಡಿಯೋ ಹಾವಳಿ ಹೆಚ್ಚಾಗಿದ್ದು ಆತಂಕ ವ್ಯಕ್ತವಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಬಳಿಕ ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಫೋಟೋವನ್ನು ಡೀಪ್ ಫೇಕ್ ತಂತ್ರಜ್ಞಾನ ಬಳಸಿಕೊಂಡು ಅಶ್ಲೀಲವಾಗಿ ಪರಿವರ್ತಿಸಿ ವೈರಲ್ ಮಾಡಲಾಗಿದೆ.

ರಶ್ಮಿಕಾ ಮಂದಣ್ಣಾ ಅವರ ಡೀಪ್ ಫೇಕ್ ವಿಡಿಯೋ ವಿಚಾರ ಸುದ್ದಿ ಇನ್ನು ಮಾಸಿಲ್ಲ ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿಯ ಡೀಪ್ ಫೇಕ್ ಫೋಟೋ ಮಾಡಿ ವೈರಲ್ ಮಾಡಲಾಗಿದೆ.
ಕತ್ರಿನಾ ಕೈಫ್ ಅವರ ಮುಂಬರುವ ’ಟೈಗರ್ 3’ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಕತ್ರಿನಾ ಕೈಫ್ ಟವೆಲ್ ಹಾಕಿಕೊಂಡು ಫೈಟಿಂಗ್ ದೃಶ್ಯವೊಂದಿದೆ. ಈ ದೃಶ್ಯದ ಸ್ಕ್ರೀನ್ ಶಾಟ್ ನ್ನು ಬಳಸಿಕೊಂಡು ಅದನ್ನು ಡೀಪ್ ಫೇಕ್ ಫೋಟೋವನ್ನಾಗಿ ಪರಿವರ್ತಿಸಲಾಗಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದ್ದು, ಕೊನೆಗೆ ಸಾಮಾಜಿಕ ಜಾಲತಾಣದಿಂದ ಆ ಫೋಟೋವನ್ನು ಡಿಲೀಟ್ ಮಾಡಲಾಗಿದೆ.

ಸಾಮಾನ್ಯವಾಗಿ ಡೀಪ್ ಫೇಕ್ ವಿಡಿಯೋ ಅಥವಾ ಫೋಟೋದಲ್ಲಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ನೈಜವಾಗಿ ಕಾಣುವಂತೆ ಪರಿವರ್ತನೆ ಮಾಡಲಾಗುತ್ತದೆ. ಅದರಂತೆ ನಟಿ ರಶ್ಮಿಕಾ ಮಂದಣ್ಣ ಬಳಿಕ ಇದೀಗ ಕತ್ರಿನಾ ಕೈಫ್ ಅವರ ಡೀಪ್ ಫೇಕ್ ಫೋಟೋವನ್ನು ವೈರಲ್ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ವ್ಯಕ್ತವಾಗಿದೆ. ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.

Comments (0)
Add Comment