ರಾಜೀನಾಮೆ ದಿನಾಂಕ ಪ್ರಕಟಿಸಲು ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವುದು ಸಾಬೀತಾದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವೇ ಪ್ರಕಟಿಸಿದಂತೆ ನಿವೃತ್ತಿ ದಿನಾಂಕವನ್ನು ತಿಳಿಸಬೇಕೆಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯತೀಂದ್ರರ ವಿಡಿಯೋ ವೈರಲ್ ಆಗುತ್ತಿದೆ. ಸಿಎಂ ಸುಳ್ಳುಗಾರರು ಎಂದು ಪಟ್ಟಿ ಹೇಳುತ್ತಿದೆ. ಈ ಸರಕಾರ ಬಂದ ದಿನದಿಂದ ಟ್ರಾನ್ಸ್‌ಪಾರ್ ದಂಧೆಯಲ್ಲಿ ತೊಡಗಿದೆ ಎಂದು ಹೇಳಿದ್ದೆವು. ಅದಕ್ಕಾಗಿ ಯತೀಂದ್ರರನ್ನು ನೇಮಿಸಲಾಗಿದೆ ಎಂದು ಮೊದಲಿನಿಂದಲೇ ಹೇಳಿದ್ದಾಗಿ ವಿವರಿಸಿದರು.

ಇದು ವರ್ಗಾವಣೆಗೆ ಸಂಬಂಧಿಸಿಲ್ಲ. ಸಿಎಸ್‍ಆರ್ ಫಂಡ್ ವಿಷಯದಲ್ಲಿ ಶಾಲೆಗಳ ಜೀರ್ಣೋದ್ಧಾರಕ್ಕೆ ಹಣ ಬಿಡುಗಡೆಗೆ ಸಂಬಂಧಿಸಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸವಾಲು ಹಾಕಿದ್ದಾರೆ.

ಈ ವಿಷಯದಲ್ಲಿ ಬಿಜೆಪಿ ಸೇರಿ ವಿಪಕ್ಷ ನಾಯಕರು ಸುಳ್ಳು ಹೇಳುವುದಾಗಿ ತಿಳಿಸಿದ್ದಾರೆ. ಇದು ಟ್ರಾನ್ಸ್‍ಫರ್ ದಂಧೆಗೆ ಸಂಬಂಧಿಸಿದೆ ಎಂದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ ಎಂದರು.

ನಿಮ್ಮ ಮಾತನ್ನು ನೀವು ಗೌರವಿಸುವಿರಾ ಎಂದು ರಾಜ್ಯದ ಜನರಿಗೆ ಗೊತ್ತಾಗಬೇಕಿದೆ ಎಂದು ತಿಳಿಸಿದರು. ಈಗಾಗಲೇ ನೀವು ಸುಳ್ಳುಗಾರರಾಗಿದ್ದೀರಿ. ಎಲ್ಲರೂ ನಿಮ್ಮನ್ನು ಸುಳ್ಳುರಾಮಯ್ಯ ಎನ್ನಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜನರು ನಿಮ್ಮ ಬಗ್ಗೆ ನಂಬಿಕೆ ಕಳಕೊಂಡಿದ್ದಾರೆ.
2014ರಲ್ಲೇ ನೀವು ಇನ್ನು ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದೀರಿ. ಇದೇ ಕೊನೆಯ ಚುನಾವಣೆ ಎಂದು ನೆನಪಿದೆ. 2018ರಲ್ಲಿ ಮತ್ತೆ ಅದನ್ನೇ ಹೇಳಿದಿರಿ. ಈಗಲೂ ಸ್ಪರ್ಧಿಸಿ ಸಿಎಂ ಆಗಿದ್ದೀರಿ. ಈ ರೀತಿ ಎಷ್ಟು ಸುಳ್ಳು ಹೇಳುತ್ತೀರಿ ಎಂದು ಪ್ರಶ್ನಿಸಿದರು.

ಸಚಿವ ಜಮೀರ್ ಅಹ್ಮದ್ ಅವರು ಸ್ಪೀಕರ್ ಚೆಯರನ್‌ ಅನ್ನು ತಾಲಿಬಾನ್ ಮಾಡಲು ಹೊರಟಿದ್ದಾರೆ. ಸ್ಪೀಕರ್ ಎಂದರೆ ಅದು ಸಂವಿಧಾನದತ್ತ ಗೌರವ. ವ್ಯಕ್ತಿ ಯಾರೇ ಇರಬಹುದು. ಯಾವ ಜಾತಿ, ಧರ್ಮಕ್ಕೂ ಸೇರಿರಬಹುದು. ಅದು ಸಂವಿಧಾನಕ್ಕೆ ಕೊಡುವ ಗೌರವ. ಮುಸ್ಲಿಮರಿಗೆ ಅವಕಾಶ ಕೊಟ್ಟ ಕಾರಣ ಬಿಜೆಪಿಯವರು ಬಂದು ತಲೆಬಾಗಿ ನಮಸ್ಕಾರ ಮಾಡುತ್ತಾರೆ ಎಂದಿದ್ದಾರೆ. ಇದು ಕೆಟ್ಟ ಪರಂಪರೆ ಸ್ಪೀಕರ್ ಕುರ್ಚಿಯನ್ನೂ ಕಾಂಗ್ರೆಸ್‍ನವರು ತಾಲಿಬಾನ್ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಜಮೀರ್ ಅಹ್ಮದ್ ಅವರ ಹೇಳಿಕೆಯನ್ನು ಕಾಂಗ್ರೆಸ್ಸಿನವರು ಖಂಡಿಸಿಲ್ಲ .ಅವರು ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಒತ್ತಾಯಿಸಿದರು.

Comments (0)
Add Comment