ರಾಜ್ಯದಲ್ಲಿ ಮತ್ತೆ ಬಿಯರ್ ದರ ಏರಿಕೆ : ಆರೇಳು ತಿಂಗಳ ಅವಧಿಯಲ್ಲಿ ಸುಮಾರು 40 ರೂ. ವರೆಗೆ ಹೆಚ್ಚಳ..!

ಬೆಂಗಳೂರು: ಬಿಯರ್‌ ದರ ಫೆಬ್ರವರಿ 1 ರಿಂದ ಪ್ರತಿ ಬಾಟಲ್‌ಗೆ 5 ರೂಪಾಯಿಗಳಿಂದ 12 ರೂಪಾಯಿವರೆಗೂ ಹೆಚ್ಚಳವಾಗರುವುದು ಮದ್ಯ ಪ್ರಿಯರನ್ನು ಕೇರಳಿಸಿದೆ. ಅಬಕಾರಿ ಸುಂಕವನ್ನು 185% ರಿಂದ 195%ಗೆ ಹೆಚ್ಚಿಸಿರುವ ಹಿನ್ನೆಲೆ, ಬಿಯರ್ ಬಾಟಲಿಗೆ 5 ರಿಂದ 12 ರೂ. ವರೆಗೂ ಬೆಲೆ ಏರಿಕೆಯಾಗಿದೆ.

ಇದರಿಂದ ಕಳೆದ 6 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 40 ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ನೇನೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಯರ್ ಮೇಲೆ ಶೇ.20 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಬಳಿಕ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಪ್ರತಿ ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ದರ ಏರಿಕೆ ಮಾಡಿದ್ದವು. ಇದೀಗ ಮತ್ತೆ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಬಿಯರ್ ದರ ಹೆಚ್ಚಳವಾಗಿದೆ.

Comments (0)
Add Comment