ರಾಜ್ಯದಲ್ಲಿ ಶೀಘ್ರದಲ್ಲೇ 3 ಸಾವಿರ ಲೈನ್ ಮ್ಯಾನ್‌ಗಳ ನೇಮಕ- ಇಂಧನ ಸಚಿವ ಕೆ.ಜೆ.ಜಾರ್ಜ್

ಮಂಗಳೂರು: ರಾಜ್ಯದಲ್ಲಿ ಆರು ಸಾವಿರ ಲೈನ್ ಮ್ಯಾನ್ ಗಳ ಬೇಡಿಕೆಯಿದ್ದು, 3 ಸಾವಿರ ಲೈನ್ ಮ್ಯಾನ್ ಗಳನ್ನು ಶೀಘ್ರವೇ ನೇಮಕ ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ನಗರದ ಮೆಸ್ಕಾಂ ಕಚೇರಿಯಲ್ಲಿ ದ.ಕ.ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮೆಸ್ಕಾಂ/ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು‌.

ಈ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈಯವರು ದ.ಕ.ಜಿಲ್ಲೆಯಲ್ಲ ಲೈನ್ ಮ್ಯಾನ್ ಗಳ ಕೊರತೆಯಿದೆ‌. ಬೇರೆ ಜಿಲ್ಲೆಗಳಿಂದ ಬಂದ ಲೈನ್ ಮ್ಯಾನ್ ಗಳು ಕೆಲವು ಸಮಯ ಇಲ್ಲಿ ಕೆಲಸ ಮಾಡಿ ಬಳಿಕ ತಮ್ಮ ಊರಿಗೆ ಟ್ರಾನ್ಸ್ ಫರ್ ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ಸ್ಥಳೀಯರಿಗೆ ಮೆಸ್ಕಾಂ ಲೈನ್ ಮ್ಯಾನ್ ತರಬೇತಿ ನೀಡಿದ್ದಲ್ಲಿ ನಾವು ಅವರಿಗೆ ಸಹಕಾರ ಕೊಡುತ್ತೇವೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್, ಶೀಘ್ರದಲ್ಲೇ ರಾಜ್ಯದಲ್ಲಿ 3ಸಾವಿರ ಲೈನ್ ಮ್ಯಾನ್ ಗಳ ನೇಮಕ ಮಾಡಲಿದ್ದೇವೆ. ಈ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯದಲ್ಲಿಯೇ ಏಕಕಾಲದಲ್ಲಿ ಮಾಡಿ, ದ.ಕ.ಜಿಲ್ಲೆಯ ಸ್ಥಳೀಯರಿಗೂ ಲೈನ್ ಮ್ಯಾನ್ ಹುದ್ದೆ ಸಿಗುವಂತೆ ಮಾಡುತ್ತೇವೆ. ಅಲ್ಲದೆ ಸ್ಥಳೀಯ ಯುವಕರಿ ತರಬೇತಿಗೆ ವ್ಯವಸ್ಥೆ ಮಾಡುವಂತೆ ಮೆಸ್ಕಾಂ ಎಂಡಿ ಪದ್ಮಾವತಿ ಅವರಿಗೆ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದರು.

Comments (0)
Add Comment