ರಾತ್ರಿ ಊಟದ ಬಳಿಕ ವಾಕಿಂಗ್​​ ಮಾಡಬಹುದಾ…? ಇಲ್ಲಿದೆ ಮಾಹಿತಿ

ಊಟದ ಬಳಿಕ ವಾಕಿಂಗ್​ ಮಾಡೋದ್ರಿಂದ ಹೊಟ್ಟೆ ನೋವು ಬರುತ್ತೆ ಎಂದು ಅನೇಕರು ಹೇಳ್ತಾರೆ. ಹೀಗಾಗಿ ಏನಾದರೂ ತಿಂದ ಬಳಿಕ ವಾಕಿಂಗ್​ ಮಾಡೋದು ಅಪಾಯಕಾರಿ ಅಂತಾ ಕೂಡ ಹೇಳಲಾಗುತ್ತೆ.

ಈ ಹೊಟ್ಟೆ ನೋವು ಬರುವ ವಿಚಾರ ನಿಜವಾಗಿದ್ದರೂ ಸಹ ಇದೇನು ಜೀವಕ್ಕೆ ಅಪಾಯಕಾರಿ ಆಗುವಂತಹ ಅಂಶವೇನಲ್ಲ. ನಮ್ಮ ಜೀರ್ಣಾಂಗಗಳು ಹೃದಯದಿಂದ ಪಂಪ್​ ಆದ ರಕ್ತದಿಂದ 20 ರಿಂದ 25 ಪ್ರತಿಶತವನ್ನ ಪಡೆದುಕೊಳ್ತಾವೆ, ಊಟವಾದ ಕೂಡಲೇ ವಾಕಿಂಗ್​ ಮಾಡೋದ್ರಿಂದ ದೇಹದಲ್ಲಿ ರಕ್ತ ಪಂಪ್​ ಆಗುವ ಪ್ರಕ್ರಿಯೆ ಹೆಚ್ಚಾಗುತ್ತೆ. ಹೀಗಾಗಿ ನಿಮಗೆ ಹೊಟ್ಟೆ ನೋವು ಬಂದ ಅನುಭವ ಉಂಟಾಗುತ್ತೆ. ಪ್ರತಿದಿನ ‘ವ್ಯಾಯಾಮ’ ಮಾಡಿದ್ರೂ ತೂಕ ಇಳಿಯೊಲ್ಲ ಕಾರಣ ಏನು…? ಆದರೆ ಊಟದ ಬಳಿಕ ನೀವು ಒಂದು 15ರಿಂದ 20 ನಿಮಿಷ ವಾಕಿಂಗ್​ ಮಾಡೋದ್ರಿಂದ ಯಾವುದೇ ಅಪಾಯ ಉಂಟಾಗೋದಿಲ್ಲ. ನೀವು ವಾಕಿಂಗ್​ ಮಾಡೋದ್ರ ಮೂಲಕ ತೂಕ ಇಳಿಸುವ ಪ್ಲಾನ್​ ಹೊಂದಿದ್ದರೆ ರಾತ್ರಿ ಊಟದ ಬಳಿಕ 10 ನಿಮಿಷವಾದರೂ ವಾಕ್​ ಮಾಡಿ.

ಕ್ರಮೇಣವಾಗಿ ಈ ಸಮಯವನ್ನ ಹೆಚ್ಚು ಮಾಡ್ತಾ ಹೋಗಿ. ಕ್ರಮೇಣ ಈ ಸಮಯ 30 ನಿಮಿಷಗಳವರೆಗೆ ಏರಿಕೆ ಮಾಡಿ. ಈ ಅಭ್ಯಾಸವನ್ನ ಹೊರತು ಪಡಿಸಿ ಇಡೀ ದಿನದಲ್ಲಿ ನೀವೆಷ್ಟು ವ್ಯಾಯಾಮ, ದೇಹ ದಂಡನೆ ಮಾಡ್ತೀರಿ ಅನ್ನೋದನ್ನ ಆಧರಿಸಿ ನಿಮ್ಮ ದೇಹದ ತೂಕ ಇಳಿಕೆಯಾಗುತ್ತಾ ಹೋಗುತ್ತೆ.

Comments (0)
Add Comment