ರಾಮಮಂದಿರ ಉದ್ಘಾಟನೆ – 30 ವರ್ಷದ ಬಳಿಕ ಮೌನ ವೃತ ಮುರಿಯಲು ಸಿದ್ದರಾದ ಮಹಿಳೆ

ಜಾರ್ಖಂಡ್:‌ ರಾಮಮಂದಿರ ಉದ್ಘಾಟನೆಯ ತನ್ನ ಕನಸು ನನಸಾಗುತ್ತಿರುವುದಕ್ಕೆ ಸುಮಾರು 30 ವರ್ಷದ (ಮೂರು ದಶಕಗಳ ಕಾಲ) ಮೌನ ವೃತದ ಶಪಥ ಕೈಗೊಂಡಿದ್ದ ಜಾರ್ಖಂಡ್‌ ನ ಮಹಿಳೆಯೊಬ್ಬರು ತನ್ನ ಮೌನ ವೃತ ಮುರಿಯಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ.

1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನ ಸರಸ್ವತಿ ದೇವಿ ಮೌನ ವೃತದ ಶಪಥ ಕೈಗೊಂಡಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರವೇ ತನ್ನ ಮೌನ ವೃತ ಮುರಿಯುವುದಾಗಿ ಆಕೆ ತಿಳಿಸಿದ್ದರು ಎಂದು ವರದಿಯಾಗಿದೆ.

ಇದೀಗ ಭವ್ಯ ರಾಮಮಂದಿರ ಉದ್ಘಾಟನೆಗೆ ಸಜ್ಜಾಗಿದ್ದು, 85 ವರ್ಷದ ಸರಸ್ವತಿ ದೇವಿ ಅವರು ಸೋಮವಾರ ರಾತ್ರಿ ಉತ್ತರಪ್ರದೇಶಕ್ಕೆ ರೈಲಿನಲ್ಲಿ ತೆರಳಿದ್ದಾರೆ.

ಇನ್ನು “ಮೌನಿ ಮಾತಾ” ಎಂದೇ ಜನಪ್ರಿಯರಾಗಿದ್ದ ಈಕೆ ತನ್ನ ಕುಟುಂಬದ ಸದಸ್ಯರೊಂದಿಗೆ ಸಾಂಕೇತಿಕ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದರು ಎನ್ನಲಾಗಿದೆ.

Comments (0)
Add Comment