ರಾಮಮಂದಿರ: ರಾಮಲಲ್ಲಾನ ದರ್ಶನ ಸಮಯದಲ್ಲಿ ಬದಲಾವಣೆ

ಅಯೋಧ್ಯೆ: ಅಯೋಧ್ಯೆ ರಾಮಮಂದಿರಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ಜ. ೨೨ ರಂದು ಸಂಪನ್ನಗೊಂಡಿದೆ. ಇದಾದ ನಂತರ ಮಧ್ಯಾಹ್ನದ ವಿರಾಮವೂ ಇಲ್ಲದೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇನ್ನುಮುಂದೆ ಪ್ರತಿದಿನ ಮಧ್ಯಾಹ್ನದ ವೇಳೆ 1 ಗಂಟೆಗಳ ಕಾಲ ಮಂದಿರದ ಬಾಗಿಲು ಮುಚ್ಚಲಾಗುತ್ತದೆ ಎಂದು ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸತ್ಯೇಂದ್ರ ದಾಸ್ ಅವರು, ಶ್ರೀ ರಾಮ್ ಲಲ್ಲಾ 5 ವರ್ಷದ ಮಗು ಮತ್ತು ಅವನು ಅಂತಹ ದೀರ್ಘ ಗಂಟೆಗಳ ಕಾಲ ಎಚ್ಚರವಾಗಿರಲು ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮಧ್ಯಾಹ್ನ 12:30 ರಿಂದ 1:30 ರವರೆಗೆ ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಮೊದಲು ಬಾಲರಾಮನ ಪ್ರಾಣಪ್ರತಿಷ್ಠೆ ಆದ ನಂತರ ಮರು ದಿನದಿಂದಲೇ ಮಂದಿರಕ್ಕೆ ನಿತ್ಯ ಸಾವಿರಾರು ಭಕ್ತರ ದಂಡು ಹರಿದುಬರುತ್ತಿದ್ದ ಕಾರಣ, ಈವರೆಗೆ ಮಧ್ಯಾಹ್ನದ ವಿರಾಮವೂ ಇಲ್ಲದೆ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇನ್ನು ಮುಂದೆ ಕೊಂಚ ಬದಲಾವಣೆಯಾಗಲಿದ್ದು, ಮಂದಿರವನ್ನು 6 ಗಂಟೆಗೆ ತೆರೆದರೂ ಅದರ ಮುನ್ನ, ಮುಂಜಾನೆ 4 ರಿಂದ 6ರವರೆಗೆ 2 ಗಂಟೆಗಳ ಕಾಲ ವಿಧಿ ವಿಧಾನಗಳನ್ನು ಆಚರಿಸಲಾಗುತ್ತದೆ ಎಂದಿದ್ದಾರೆ.

Comments (0)
Add Comment