ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್ – ಆರೋಪಿಗಳು ಕರ್ನಾಟಕ ಮೂಲದವರು NIA ಬಹಿರಂಗ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪಿಗಳ ನಿಜವಾದ ಚಿತ್ರಣ ಈಗ ಬಹಿರಂಗವಾಗಿದೆ. ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ. ಇಬ್ಬರೂ ಆರೋಪಿಗಳು ತಮಿಳುನಾಡು ಮೂಲದವರಲ್ಲ, ಶಿವಮೊಗ್ಗದ ಐಸಿಸ್ ಮಾಡ್ಯೂಲ್ನೊಂದಿಗೆ ಸಂಬಂಧ ಹೊಂದಿದ್ದು, ಈ ಹಿಂದೆಯೂ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮುಸಾವೀರ್ ಹುಸೇನ್ ಶಜೀಬ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನು ಎನ್ನಲಾಗಿದೆ. ಇದಲ್ಲದೇ ಎರಡನೇ ಆರೋಪಿ ಅಬ್ದುಲ್ ಮಥೇರನ್ ತಾಹಾ ಕೂಡ ತೀರ್ಥಹಳ್ಳಿ ನಿವಾಸಿಯಾಗಿದ್ದಾನೆ. ಸ್ಫೋಟದ ಮೊದಲು ಅವರ ಚಲನವಲನಗಳನ್ನು ಪರಿಶೀಲಿಸಿದ ಎನ್‌ಐಎ ಮೂಲಗಳು, ಇವರಿಬ್ಬರು ಚೆನ್ನೈನ ಟ್ರಿಪ್ಲಿಕೇನ್ನ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಸ್ಫೋಟದ ನಂತರ ಮತ್ತೆ ಚೆನ್ನೈಗೆ ಮರಳಿದ್ದರು ಎಂದು ತಿಳಿದುಬಂದಿದೆ. ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಆರೋಪಿಗಳ ಕೊನೆಯ ಅಡಗುತಾಣ ಪತ್ತೆಯಾಗಿದೆ. ಎನ್‌ಐಎ ಈಗಾಗಲೇ ಪ್ರಮುಖ ಆರೋಪಿಗಳಿಗೆ ಬಹುಮಾನವನ್ನು ಘೋಷಿಸಿದೆ.

Comments (0)
Add Comment