‘ರಾಹುಲ್ ಜೀ ನಿಮಗೆ 50 ವರ್ಷ ದಾಟಿದ್ದು ಒಂಟಿತನ ನಿಮ್ಮನ್ನು ಕಾಡುತ್ತಿರಬಹುದು’ – ಓವೈಸಿ ವ್ಯಂಗ್ಯ

ಹೈದರಾಬಾದ್: ರಾಹುಲ್ ಗಾಂಧಿ ಅವರೇ ನಿಮಗೆ ಈಗಾಗಲೇ 50 ವರ್ಷ ದಾಟಿದ್ದು, ಒಂಟಿತನ ನಿಮ್ಮನ್ನು ಕಾಡುತ್ತಿರಬಹುದು ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.

ಓವೈಸಿ ಅವರು ಪ್ರಧಾನಿ ಮೋದಿಯ ಮಾಜಿ ಸ್ನೇಹಿತ ಎಂಬ ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಾರ ನಿರ್ಧಾರಗಳನ್ನು ಪ್ರಶ್ನೆ ಮಾಡುವುದಿಲ್ಲ, ಯಾರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ, ಯಾರಿಗೂ ತೊಂದರೆ ಕೊಡುವುದಿಲ್ಲ. ನೀವೂ ಸಹ ನಿಮ್ಮನ್ನು ಚುಡಾಯಿಸಿದವರನ್ನು ಬಿಡಬೇಡಿ ಎಂದಿದ್ದಾರೆ.

ಪ್ರಧಾನಿ ಮೋದಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಮತ್ತು ಓವೈಸಿ ಇಬ್ಬರು ಸ್ನೇಹಿತರಿದ್ದಾರೆ ಎಂದು ಇತ್ತೀಚೆಗೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದೀಗ ಓವೈಸಿ ಅವರು ರಾಹುಲ್ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.

Comments (0)
Add Comment