ರುಚಿಕರವಾದ ಆಲೂ ಪೋಹಾ ಬೋಂಡಾ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು…

  • ಬೇಯಿಸಿದ ಆಲೂಗಡ್ಡೆ ಮಧ್ಯಮ ಗಾತ್ರ-1
  • ಪೇಪರ್ ಅವಲಕ್ಕಿ- 1/2 ಬಟ್ಟಲು
  • ಬಿಳಿ ಎಳ್ಳು-1 ಚಮಚ
  • ಎಣ್ಣೆ-ಕರಿಯಲು
  • ಅಡುಗೆ ಸೋಡಾ- ಸ್ವಲ್ಪ
  • ಅಚ್ಚ ಖಾರದ ಪುಡಿ- ಅರ್ಧ ಚಮಚ
  • ಕೊತ್ತಂಬರಿ ಸೊಪ್ಪು- ಸ್ವಲ್ಪ (ಸಣ್ಣಗೆ ಹೆಚ್ಚಿದ್ದು)
  • ಹಸಿಮೆಣಸಿನ ಕಾಯಿ – 2 (ಸಣ್ಣಗೆ ಹೆಚ್ಚಿದ್ದು)
  • ಅಚ್ಚ ಖಾರದ ಪುಡಿ- ಕಾಲು ಚಮಚ
  • ನಿಂಬೆರಸ – ಸ್ವಲ್ಪ
  • ಜೀರಿಗೆ-ಸ್ವಲ್ಪ
  • ಅರಿಶಿಣದ ಪುಡಿ- ಸ್ವಲ್ಪ
  • ರುಚಿಗೆ ತಕ್ಕಷ್ಟು-ಉಪ್ಪು

ಮಾಡುವ ವಿಧಾನ…

 

  • ಬೇಯಿಸಿದ ಆಲೂಗಡ್ಡೆಯನ್ನು ಗಂಟಿಲ್ಲದೆ ಪುಡಿಮಾಡಿಕೊಳ್ಳಿ.
  • ಪೇಪರ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ಬಸಿದು ಆಲೂ ಪುಡಿಯೊಂದಿಗೆ ಸೇರಿಸಿ, ನಂತರ ಎಳ್ಳು, ಉಪ್ಪು, ಅಡುಗೆ ಸೋಡಾ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ ಹಾಕಿ, ಅಚ್ಚ ಖಾರದ ಪುಡಿ, ನಿಂಬೆ ರಸ ಹಾಗೂ ಜೀರಿಗೆ ಹಾಕಿ ಗಟ್ಟಿಯಾಗಿ ಕಲೆಸಿ. ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.
  • ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಉಂಡೆಗಳನ್ನು ಎಣ್ಣೆಯಲ್ಲಿ ಕರಿಯಿರಿ. ಇದೀಗ ರುಚಿಕರವಾದ ಆಲೂ ಪೋಹಾ ಬೋಂಡಾ ಸವಿಯಲು ಸಿದ್ಧ.
Comments (0)
Add Comment