ರುಚಿಕರವಾದ ‘ಬಂಗುಡೆ ಮೀನಿನ ಸಾರು’ ಮಾಡುವ ವಿಧಾನ

ಸಾಮಗ್ರಿಗಳು:

1 ಕೆಜಿ ಮೀನು, 1 ಕಪ್ ತೆಂಗಿನಕಾಯಿ ತುರಿ, 15 ರಿಂದ 20 ಬ್ಯಾಡಗಿ ಮೆಣಸಿನಕಾಯಿ, 3ಟೀ ಸ್ಪೂನ್ ಕಾಳುಮೆಣಸು, 2 ಟೀ ಸ್ಪೂನ್ ಧನಿಯಾಬೀಜ, 1ಟೀ ಸ್ಪೂನ್ ಮೆಂತೆ, 1 ಟೀ ಸ್ಪೂನ್ ಅರಿಶಿನ, 1/2 ಟೀ ಸ್ಪೂನ್ ಓಮದ ಕಾಳು, ಸ್ವಲ್ಪ ಹುಣಸೆಹಣ್ಣು 3ರಿಂದ 4 ಎಸಳು ಬೆಳ್ಳುಳ್ಳಿ, 1 ಈರುಳ್ಳಿ. ರುಚಿಗೆ ತಕ್ಕಷ್ಟು ಉಪ್ಪು.

 

ಮಾಡುವ ವಿಧಾನ :

ಮೊದಲು ಕಾಯಿ ತುರಿ ತೆಗೆದುಕೊಂಡು ಅದಕ್ಕೆ ಒಣಮೆಣಸು, ಧನಿಯಾ ಬೀಜ, ಮೆಂತೆ, ಕಾಳುಮೆಣಸು, ಅರಶಿನ, ಬೆಳ್ಳುಳ್ಳಿ, ಈರುಳ್ಳಿ, ಸ್ವಲ್ಪ ಹುಣಸೆಹಣ್ಣು ಇವಿಷ್ಟನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು ನಂತರ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಮೀನು ಹಾಕಿ, ಉಪ್ಪು ಸೇರಿಸಿ 10 ನಿಮಿಷ ಕುದಿಸಬೇಕು.

Comments (0)
Add Comment