ರುಚಿಕರವಾದ ವೆಜಿಟೆಬಲ್ ಬಿರಿಯಾನಿ ಮಾಡುವ ವಿಧಾನ

ಬಿರಿಯಾನಿ ಎಂದ ಕೂಡಲೇ ಅನೇಕರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ವೆಜಿಟೇಬಲ್ ಬಿರಿಯಾನಿ ಪುಡಿ ಕುರಿತ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಅರಿಶಿಣ -1 ಚಮಚ, ಗೋಡಂಬಿ -20 ಗ್ರಾಂ, ಕಾಳು ಮೆಣಸು -5 ಗ್ರಾಂ, ಎಣ್ಣೆ -100 ಗ್ರಾಂ, ಏಲಕ್ಕಿ -2, ಹುರಿಗಡಲೆ -50 ಗ್ರಾಂ, ಕರಿಬೇವು 6 ಎಲೆ, ಇಂಗು -1 ಚಮಚ, ದನಿಯಾ -150 ಗ್ರಾಂ, ಜೀರಿಗೆ -100 ಗ್ರಾಂ, ಕೆಂಪಾದ ಗಿಡ್ಡ ಮೆಣಸಿನಕಾಯಿ -100 ಗ್ರಾಂ, ಗಸಗಸೆ -100 ಗ್ರಾಂ.

ತಯಾರಿಸುವ ವಿಧಾನ:

ಮೊದಲಿಗೆ ಅಗಲವಾದ ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಕಾಯಿಸಿ. ಅರಿಶಿಣ, ಗೋಡಂಬಿ, ಗಸಗಸೆ, ಹುರಿಗಡಲೆ, ಕಡಲೆಕಾಯಿ ಬೀಜ, ಒಣಮೆಣಸಿನಕಾಯಿ, ಕರಿಬೇವು, ದನಿಯಾ, ಇಂಗು, ಏಲಕ್ಕಿ ಹಾಕಿ ಕ್ರಮವಾಗಿ ಹುರಿದುಕೊಳ್ಳಿ. ಸ್ವಲ್ಪ ಆರಿದ ಬಳಿಕ ಗ್ರೈಂಡರ್ ನಿಂದ ಸಣ್ಣಗೆ ತೆಳುವಾಗಿ ಪುಡಿ ಮಾಡಿಕೊಳ್ಳಿ. ತೇವವಾಗಿಲ್ಲದ ಬಾಟಲಿಯಲ್ಲಿ ಪುಡಿ ಶೇಖರಿಸಿಟ್ಟುಕೊಳ್ಳಿ. ಬೇಕೆನಿಸಿದಾಗ ಟೇಸ್ಟ್ ನೋಡಿ.

Comments (0)
Add Comment