ರುಚಿಯಾದ ಖಾದ್ಯ ʼಕಡಾಯಿ ಪನ್ನೀರ್ʼ ಮಸಾಲ ಮಾಡುವ ವಿಧಾನ

ಪನ್ನೀರ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದರಿಂದ ರುಚಿ ರುಚಿಯಾದ ಖಾದ್ಯಗಳನ್ನು ಮಾಡಿಕೊಂಡು ಸವಿಯಬಹುದು. ರುಚಿಕರವಾದ ಕಡಾಯಿ ಪನ್ನೀರ್ ಮಸಾಲ ಮಾಡುವ ವಿಧಾನದ ಕುರಿತು ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು: ಪನ್ನೀರ್ ತುಂಡುಗಳು-200 ಗ್ರಾಂ, ಕ್ಯಾಪ್ಸಿಕಂ – 1 ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ, ಈರುಳ್ಳಿ – 1 ದೊಡ್ಡದ್ದು, ಟೊಮೆಟೊ ಪ್ಯೂರಿ – 1 ಕಪ್, ಕ್ರೀಂ – 1 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್, ಶುಂಠಿ ಬೆಳ್ಳುಳ್ಳಿ ಮಿಶ್ರಣ – 1/2 ಟೀ ಸ್ಪೂನ್, ಒಣಮೆಣಸು – 4, ಚಕ್ಕೆ – 1 ಸಣ್ಣ ತುಂಡು, ಲವಂಗ – 2, ಕೊತ್ತಂಬರಿ ಕಾಳು – 1 ಟೇಬಲ್ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಅರಿಶಿನ – 1/4 ಟೀ ಸ್ಪೂನ್, ಗರಂ ಮಸಾಲ – 1/2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಬೆಣ್ಣೆ – ಸ್ವಲ್ಪ. ಮಾಡುವ ವಿಧಾನ: ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದರಲ್ಲಿ ಮೆಣಸು, ಕೊತ್ತಂಬರಿ ಕಾಳು, ಜೀರಿಗೆ, ಚಕ್ಕೆ, ಲವಂಗ ಹಾಕಿ ಹುರಿದುಕೊಳ್ಳಿ. ನಂತರ ಇದು ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿನಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಪ್ಯಾನ್ ಗೆ ಒಂದು 1 ಟೇಬಲ್ ಸ್ಪೂನ್ ನಷ್ಟು ಬೆಣ್ಣೆ ಹಾಕಿ ಅದಕ್ಕೆ ಪನ್ನೀರ್, ಕ್ಯಾಪ್ಸಿಕಂ ಹಾಕಿ ಹುರಿದುಕೊಳ್ಳಿ. ಇದು ಬೆಂದ ನಂತರ ಒಂದು ತಟ್ಟೆಗೆ ಹಾಕಿ ಎತ್ತಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್ ಗೆ ಬೆಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಕೆಂಪಗಾದ ನಂತರ ಅದಕ್ಕೆ ಟೊಮೆಟೊ ಪ್ಯೂರಿ ಹಾಕಿಕೊಳ್ಳಿ. 2 ನಿಮಿಷ ಇದು ಚೆನ್ನಾಗಿ ಬೇಯಲಿ. ನಂತರ ಅರಿಶಿನ, ರುಬ್ಬಿಟ್ಟುಕೊಂಡ ಮಸಾಲ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ 2 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಉಪ್ಪು, ಗರಂ ಮಸಾಲ, ಕ್ಯಾಪ್ಸಿಕಂ, ಪನ್ನೀರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದಾದ ನಂತರ ಕ್ರೀಮ್ ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷ ಕುದಿಸಿ ಕೊಳ್ಳಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ್ರೆ ರುಚಿಕರವಾದ ಕಡಾಯಿ ಪನ್ನೀರ್ ಮಸಾಲ ಸವಿಯಲು ಸಿದ್ಧ.

Comments (0)
Add Comment