ರೇಮಂಡ್ ಎಂ.ಡಿ ಗೌತಮ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ-ನವಾಜ್ ಮೋದಿ

ಮುಂಬೈ: ರೇಮಂಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ನನ್ನ ಮಾಜಿ ಪತಿ ಗೌತಮ್ ಸಿಂಘಾನಿಯಾ ಅವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನೀತಾ ಅಂಬಾನಿ ಹಲ್ಲೆ ನಡೆದ ಸ್ಥಳದಲ್ಲೇ ಇದ್ದರು ಎಂದು ಗೌತಮ್ ಸಿಂಘಾನಿಯಾ ಅವರ ಮಾಜಿ ಪತ್ನಿ ನವಾಜ್ ಮೋದಿ ಆರೋಪಿಸಿದ್ದಾರೆ. ನವೆಂಬರ್ 10ರಂದು ದೀಪಾವಳಿ ಔತಣ ಕೂಟದ ವೇಳೆ ಗೌತಮ್ ಸಿಂಘಾನಿಯಾ ನಿವಾಸದ ಆವರಣದಲ್ಲಿ ಈ ಘಟನೆ ನಡೆದಿದೆ. ಗೌತಮ್ ಸಿಂಘಾನಿಯಾ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವಾಗ ನೀತಾ ಅಂಬಾನಿ ಮತ್ತು ಅನಂತ್ ಅಂಬಾನಿ ಅದೇ ಸ್ಥಳದಲ್ಲಿ ಇದ್ದರು. ನನ್ನ ಮೇಲೆ ಹಲ್ಲೆ ಆಗುತ್ತಿರುವುದನ್ನು ತಡೆಯಲು ಬಂದ ಪೊಲೀಸರನ್ನು ಕೂಡ ಗೌತಮ್ ಸಿಂಘಾನಿಯಾ ತಡೆದಿದ್ದಾರೆ ಎಂದು ನವಾಜ್ ಮೋದಿ ಆರೋಪಿಸಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ಗೌತಮ್ ಹಾಗೂ ನವಾಜ್ ದಾಂಪತ್ಯದಲ್ಲಿ ಇತ್ತೀಚೆಗೆ ಬಿರುಕು ಮೂಡಿದೆ. ಗೌತಮ್ ಸಿಂಘಾನಿಯಾ ಅವರು ಪತ್ನಿಯಿಂದ ಬೇರ್ಪಟ್ಟಿದ್ದಾರೆ.

Comments (0)
Add Comment