ರೈತರ ಹುಡುಗರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂ…!

ಒಂಟಿ ರೈತರು ಕೂಡಿ ಬಾಳಬೇಕು ಎಂದರೆ ಹೆಂಡತಿ ಕೊಡುವವರೇ ಇಲ್ಲದಂತಾಗಿದೆ. ಹೌದು, ಇದು ನಿಜಕ್ಕೂ ರೈತರು ಚಿಂತಿಸಬೇಕಾದ ವಿಷಯ. 45 ಕಳೆದರೂ ರೈತರ ಮಕ್ಕಳ ಮದುವೆ ಮಾತ್ರ ಆಗುತ್ತಿಲ್ಲ. ಎಷ್ಟೇ ದುಡಿದರೂ, ಎಷ್ಟೇ ಶ್ರೀಮಂತರಿದ್ದರೂ ರೈತರ ಮಕ್ಕಳಿಗೆ ಮದುವೆ ಮಾಡುವವರಿಲ್ಲ ಎಂದರು. ಈ ಕಾರಣಕ್ಕೆ ರಾಜ್ಯ ರೈತ ಸಂಘಟನೆಗಳ ಮುಖಂಡರು ಹಾಗೂ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಸಿಎಂ ಸಿದ್ದರಾಮಯ್ಯ ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ರೈತರ ಮನವಿ ಏನು?

ರೈತರಿಗೆ ಏನು ಮಾಡಿದರೂ ಹುಡುಗಿಗೆ ಮದುವೆ ಮಾಡುವವರು ಯಾರೂ ಇಲ್ಲ, ರೈತರು ಶ್ರೀಮಂತರಾದರೂ ಹೆಣ್ಣುಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ರೈತನಿಗೆ ಕೊಟ್ಟು ಮದುವೆ ಮಾಡಿಸುವ ಪರಿಸ್ಥಿತಿ ಇದೆ.

ಒಂಟಿಯಾಗಿ ಎಷ್ಟು ದಿನ ಬದುಕಲು ಸಾಧ್ಯ, ರೈತರ ಮಕ್ಕಳೂ ಕೂಡಿ ಬಾಳಬೇಕೋ ಬೇಡವೋ, ಈ ಕಾರಣಕ್ಕೆ ಕನ್ಯಾ ಭಾಗ್ಯ ಕೊಡಿ ಎಂದು ರೈತ ಸಂಘಟನೆ ಮುಖಂಡರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಮಗಳಿಗೆ 5 ಲಕ್ಷ ನೀಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ರಾಜ್ಯ ಸರ್ಕಾರದ ನಿರ್ಧಾರ ಏನು?

ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಕೊನೆಗೂ ರೈತರ ಈ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸುತ್ತದೆಯೇ..?  ಎಂಬುದನ್ನು ಕಾದು ನೋಡಬೇಕಿದೆ.

Comments (0)
Add Comment