ರೈಲುಗಳ ಕನಿಷ್ಠ ಪ್ರಯಾಣ ದರ 10ರೂ.ಗೆ ಇಳಿಕೆ

ಭಾರತೀಯ ರೈಲ್ವೆಯು ಸಾಮಾನ್ಯ ರೈಲು ಪ್ರಯಾಣದ ಕನಿಷ್ಠ ಟಿಕೆಟ್‌ ದರವನ್ನು 10ರೂ.ಗಳಿಗೆ ಇಳಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿದೆ. ಪರಿಷ್ಕೃತ ದರ ನಿನ್ನೆಯಿಂದ ಜಾರಿಯಾಗಿದೆ. ಕೊರೊನಾ ಸಂದರ್ಭದಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕ ರೈಲುಗಳ ಹೆಸರನ್ನು ಎಕ್ಸ್‌ಪ್ರೆಸ್‌ ಸ್ಪೆಷಲ್‌,  ಮೆಮು/ಡೆಮು ಎಕ್ಸ್‌ಪ್ರೆಸ್‌ ಎಂದು ಪರಿಷ್ಕರಿಸಿ ದರ ಹೆಚ್ಚಳ ಮಾಡಿತ್ತು.

ಆಗ ಪ್ರಯಾಣಿಕ ರೈಲುಗಳಿಗೆ ಕನಿಷ್ಠ10ರೂ. ಇದ್ದ ಟಿಕೆಟ್‌ ದರವನ್ನು 30ರೂ. ಏರಿಸಲಾಗಿತ್ತು. ಈಗ ಈ ರೈಲುಗಳ ಸೆಕೆಂಡ್‌ ಕ್ಲಾಸ್‌ ಸಾಮಾನ್ಯ ಟಿಕೆಟ್‌ ದರವನ್ನು ಈ ಮೊದಲಿನಂತೆ 10ರೂ.ಗೆ ಇಳಿಸಲಾಗಿದೆ.

Comments (0)
Add Comment