ಲಷ್ಕರ್-ಎ-ತೊಯ್ಬಾ ಸಂಘಟನೆ ಮಾಜಿ ಕಮಾಂಡರ್ ಅಕ್ರಮ್ ಘಾಜಿ ಗುಂಡಿಕ್ಕಿ ಹತ್ಯೆ

ಇಸ್ಲಾಮಾಬಾದ್: ಲಷ್ಕರ್-ಎ-ತೊಯ್ಬಾ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಅಕ್ರಮ್ ಗಾಜಿ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಅಕ್ರಮ್ ಖಾನ್, ಬಜೌರ್ ಜಿಲ್ಲೆಯಲ್ಲಿ ಅಪರಿಚಿತ ದಾಳಿಕೋರರಿಂದ ಗುಂಡಿಕ್ಕಿ ಕೊಲ್ಲಲ್ಪತ್ತಿದ್ದಾನೆ ಎಂದು ಹೇಳಲಾಗಿದೆ. ಇನ್ನು 2018 ರಿಂದ 2020 ರವರೆಗೆ ಎಲ್ಇಟಿ ನೇಮಕಾತಿ ಸೆಲ್ ಅನ್ನು ಮುನ್ನಡೆಸಿದ್ದ ಖಾನ್, ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಾಷಣಗಳಿಗೆ ಹೆಸರುವಾಸಿಯಾಗಿದ್ದ. ಭಯೋತ್ಪಾದಕ ಗುಂಪಿನ ಪ್ರಸಿದ್ಧ ವ್ಯಕ್ತಿಯಾಗಿದ್ದ ಅಕ್ರಮ್ ಘಾಜಿ ದೀರ್ಘಕಾಲದವರೆಗೆ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

Comments (0)
Add Comment