ಲೋಕಸಭಾ ಚುನಾವಣೆ ಹಿನ್ನಲೆ ಯುಪಿಎಸ್​​ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ ಮೂಂದುಡಿಕೆ

ನವದೆಹಲಿ:ಯುಪಿಎಸ್​​ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ (ಪ್ರಿಲಿಮಿನರಿ) 2024 ಕ್ಕೆ ತಯಾರಿ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಸುದ್ದಿಯೊಂದು ಹೊರ ಬಿದ್ದಿದೆ. ಲೋಕಸಭಾ ಚುನಾವಣೆಯ ದಿನಾಂಕಗಳು ಪ್ರಕಟವಾದ ಹಿನ್ನಲೆಯಲ್ಲಿ ಇದೀಗ ಪೂರ್ವಭಾವಿ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ಮುಂದೂಡಿದೆ

ಪರೀಕ್ಷಾ ದಿನಾಂಕ ಮುಂದೂಡಿಕೆಯ ಬಗ್ಗೆ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಯುಪಿಎಸ್​​ಸಿ ನೀಡಿದ ಮಾಹಿತಿಯ ಪ್ರಕಾರ, ಸಿಎಸ್‌ಇ ಹಾಗೂ ಇಂಡಿಯನ್ ಫಾರೆಸ್ಟ್‌ ಸರ್ವೀಸ್‌ ಪೂರ್ವಭಾವಿ ಪರೀಕ್ಷೆಯನ್ನು 26 ಮೇ 2024 ರ ಬದಲಿಗೆ 16 ಜೂನ್ 2024 ರಂದು ನಡೆಸಲಾಗುವುದು ಎಂದು ತಿಳಿಸಿದೆ.

ಯುಪಿಎಸ್​​ಸಿ ಸಿಎಸ್ ಇ ಪ್ರಿಲಿಮಿನರಿ ಪರೀಕ್ಷೆ 2024 ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.

Comments (0)
Add Comment