ಲೋಕಸಭೆಯಲ್ಲಿ ಗದ್ದಲದ ನಡುವೆ ಮೊದಲ ದಿನದ ವಿಶೇಷ ಅಧಿವೇಶನ ಆರಂಭ

ನವದೆಹಲಿ: ಸೋಮವಾರದಿಂದ 5 ದಿನಗಳ ಕಾಲ ಸಂಸತ್‌ನ ವಿಶೇಷ ಅಧಿವೇಶನವನ್ನು ಸರ್ಕಾರ ನಡೆಸಲಿದ್ದು, ಮೊದಲ ದಿನವಾದ ಇಂದು ಗದ್ದಲದ ನಡುವೆ ಮೊದಲ ದಿನದ ವಿಶೇಷ ಅಧಿವೇಶನ ಆರಂಭವಾಗಿದೆ.

ಹಳೆ ಸಂಸತ್ ಭವನದಲ್ಲಿ ಇಂದು ಕಲಾಪ ಆರಂಭವಾಗಿದ್ದು, ನಾಳೆ ಹೊಸ ಸಂಸತ್ ಭವನಕ್ಕೆ ಕಲಾಪ ವರ್ಗಾವಣೆಯಾಗಿ ಅಧಿಕೃತ ಕಲಾಪ ಆರಂಭವಾಗಲಿದೆ.

ಸಂಸತ್ತಿನ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಅಧಿವೇಶನದಲ್ಲಿ ಒಟ್ಟು ಎಂಟು ಮಸೂದೆಗಳ ಅಂಗೀಕಾರಕ್ಕಾಗಿ ಪಟ್ಟಿ ಮಾಡಿದ್ದಾರೆ.

ಇನ್ನು ಅಧಿವೇಶನದ ಮೊದಲ ದಿನದಂದು ಸಾಮಾನ್ಯವಾಗಿ, ಬಜೆಟ್, ಸಂಸತ್ತಿನ ಮಾನ್ಸೂನ್ ಮತ್ತು ಚಳಿಗಾಲದ ಅಧಿವೇಶನಗಳು ಪ್ರತಿ ವರ್ಷ ನಡೆಯುತ್ತವೆ ಆದರೆ ಈ ವರ್ಷ ಸಂಸತ್ತಿನ 75 ವರ್ಷಗಳ ಪಯಣದ ವಿಶೇಷ ಚರ್ಚೆಯನ್ನು ಸರ್ಕಾರ ಪಟ್ಟಿ ಮಾಡಿದೆ.

Comments (0)
Add Comment