ವರಾಹಚಕ್ರಂ ಸಿನಿಮಾದ ಮೂಲಕ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಪ್ರೇಮ

ಬೆಂಗಳೂರು: ಸ್ಯಾಂಡಲ್‍ವುಡ್ ನಟನೆಯ ಮೂಲಕ ಮಿಂಚಿದ್ದ ನಟಿ ಪ್ರೇಮಾ ಇದೀಗ ವರಾಹಚಕ್ರಂ ಎಂಬ ಸಿನಿಮಾನಕ್ಕೆ ಹಾಡು ಹಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಲು ಸಚ್ಚಾಗಿದ್ದಾರೆ.

ಗೌರಿಪುತ್ರ ಖ್ಯಾತಿಯ ಮಂಜು ಮಸ್ಕಲ್ ಮಟ್ಟಿ ಅವರ ನಿರ್ದೇಶನ‌ದಲ್ಲಿ ಮೂಡಿಬರುತ್ತಿರುವ ವರಾಹಚಕ್ರಂ ಚಿತ್ರ ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಪದ್ದತಿಗಳು, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಥಾಹಂದರವನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದರೆ ಅರ್ಜುನ್ ದೇವ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದ ಪಾತ್ರದಲ್ಲಿ ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಕಾಣಿಸಿಕೊಂಡಿದ್ದಾರೆ.

ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಸ್ನೇಹಿತರೆಲ್ಲ ಸೇರಿ ನಿರ್ಮಿಸುತ್ತಿರುವ ವರಾಹಚಕ್ರಂ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ಸೆಟ್ ನಲ್ಲಿ ಪ್ರೇಮ ಅವರು ಹಾಡುತ್ತಿರುವಾಗ ಅದನ್ನು ಕೇಳಿದ ನಿರ್ದೇಶಕರು, ಈ ಹಾಡನ್ನು ನೀವೆ ಹಾಡಿ ಎಂದು ಕೇಳಿದ್ದಾರೆ.

ಇನ್ನು ಈ ಕೋರಿಕೆಗೆ ಪ್ರೀತಿಯಿಂದ ಒಪ್ಪಿದ ಪ್ರೇಮ ಅವರು ಹಾಡಿಗೆ ದನಿಯಾಗಿದ್ದಾರೆ. ನಾಯಕಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿರುವ ಪ್ರೇಮ ಅವರು ಈ ಚಿತ್ರದಲ್ಲಿ ತುಂಬಾ ಅನುಭವಿ ಗಾಯಕಿಯ ಹಾಗೆ ಹಾಡಿದ್ದು ತುಂಬಾ ವಿಶೇಷವಾಗಿತ್ತು.

Comments (0)
Add Comment