ವಾಟ್ಸಪ್‌ನ COMPANION MODE ಬಗ್ಗೆ ನಿಮಗೆ ಗೊತ್ತಾ?

ಜಗತ್ತಿನ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಎನಿಸಿಕೊಂಡಿರುವ ವಾಟ್ಸಾಪ್ ತನ್ನ ಬಳಕೆದಾರರ ಅನಕೂಲಕ್ಕೆ ತಕ್ಕಂತೆ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್ ಗಳನ್ನು ಅಳವಡಿಸುತ್ತಲೇ ಇರುತ್ತದೆ. ಈ ಮೂಲಕ ವಾಟ್ಸಾಪ್ ಬಳಕೆದಾರರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದೆ. ಇದೀಗ ವಾಟ್ಸಪ್‌ನಲ್ಲೊ ‘COMPANION MODE’ ಎಂಬ ಹೊಸ ಫೀಚರ್ ಅಳವಡಿಕೆಯಾಗಿದ್ದು, ಈ ಹೊಸ ಫೀಚರ್ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಏನಿದು COMPANION MODE?

ವಾಟ್ಸಾಪ್ ಇದೇ ವರ್ಷ COMPANION MODE ಅನ್ನು ಜಾರಿಗೆ ತರಲು ನಿರ್ಧರಿಸಿದೆ‌ ಎನ್ನಲಾಗಿದೆ.ಈ ಹೊಸ ಫೀಚರ್ ನೆರವಿನಿಂದಾಗಿ ಬಳಕೆದಾರರು ಏಕಕಾಲದಲ್ಲಿ ಒಂದೇ ವಾಟ್ಸಪ್‌ ಖಾತೆಯನ್ನು ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ಗಳು ಸೇರಿ ನಾಲ್ಕು ಡಿವೈಸ್‌ಗಳಲ್ಲಿ ಬಳಸಬಹುದಾಗಿದೆ. ಕಂಪಾನಿಯನ್‌ ಮೋಡ್‌ನಲ್ಲಿ ವಾಟ್ಸಪ್‌ ಬಳಸುತ್ತಿರುವ ಡಿವೈಸ್‌ಗಳಲ್ಲಿ ವಾಟ್ಸಪ್‌ ಚಾಟ್‌, ವಾಯ್ಸ್‌ ಮತ್ತು ವಿಡಿಯೋ ಕಾಲ್‌ ಮಾಡಬಹುದು. ಆದರೆ ಹೊಸ ಅಪ್‌ಡೇಟ್‌, ಸ್ಟೇಟಸ್‌, ಚಾನಲ್‌ಗಳನ್ನು ವೀಕ್ಷಿಸಲು ಸಾಧ್ಯವಿಲ್ಲ.

ಕಂಪಾನಿಯನ್‌ ಮೋಡ್‌ ಬಳಸೋದು ಹೇಗೆ?

ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಐಒಎಸ್‌ ಮೂಲಕ ವಾಟ್ಸಪ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಬೇಕು. ಬಳಿಕ ಭಾಷೆ ಆಯ್ಕೆ ಮಾಡಬೇಕು. ಮೊಬೈಲ್‌ ನಂಬರ್‌ ದಾಖಲು ಮಾಡುವ ಪೇಜ್‌ ತೆರೆದುಕೊಳ್ಳಲಿದ್ದು ಮೊಬೈಲ್‌ ನಂಬರ್‌ ದಾಖಲಿಸುವ ಬದಲು ಬಲ ಭಾಗ ಮೇಲೆ ಮೆನು ಕ್ಲಿಕ್‌ ಮಾಡಬೇಕು.

ಇದರಲ್ಲಿನ LINK ANOTHER DEVICE ಆಪ್ಷನ್‌ ಕ್ಲಿಕ್‌ ಮಾಡಬೇಕು. ಅಲ್ಲಿ QR CODE ಕಾಣಿಸಲಿದೆ. ಅದನ್ನು ವಾಟ್ಸಪ್‌ ಖಾತೆ ಹೊಂದಿರುವ ಪ್ರೈಮರಿ ಡಿವೈಸ್‌ ಮೂಲಕ ಸ್ಕ್ಯಾನ್‌ ಮಾಡಿದರೆ ಲಿಂಕ್‌ ಆಗಲಿದೆ.

Comments (0)
Add Comment