ವಾಣಿಜ್ಯ ಬಳಕೆ ಸಿಲಿಂಡರ್ ದರದಲ್ಲಿ 25 ರೂ. ಏರಿಕೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (OMC)19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಿದ್ದು ಇಂದು ಮಾರ್ಚ್ 1, ಶುಕ್ರವಾರದಿಂದ ಜಾರಿಗೆ ಬರಲಿದೆ.

ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ನ ಚಿಲ್ಲರೆ ಬೆಲೆ 1,795 ರೂಪಾಯಿ ಆಗಿದೆ. ಉಳಿದಂತೆ ಮುಂಬೈನಲ್ಲಿ 1,749 ರೂ, ಚೆನ್ನೈ ನಲ್ಲಿ 1,960.50 ರೂ., ಕೋಲ್ಕ ತ್ತದಲ್ಲಿ 1,911 ರೂ. ರಷ್ಟಿದೆ.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸತತ ಎರಡನೇ ಬಾರಿಗೆ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ಫೆಬ್ರವರಿ 1 ರಂದು, 19 ಕೆಜಿ ಗ್ಯಾಸ್ ಸಿಲಿಂಡರ್ ದರವು 14 ರಷ್ಟು ಹೆಚ್ಚಾಗಿತ್ತು.14.2 ಕೆ.ಜಿಯ ಗೃಹ ಬಳಕೆ ಸಿಲಿಂಡರ್ ದರವು ಯಥಾಸ್ಥಿತಿಯಲ್ಲಿದೆ.

Comments (0)
Add Comment