ವಿಮಾನದಲ್ಲಿ ಜೋಡಿಯ ಸರಸ ಸಲ್ಲಾಪ! ಸಹ ಪ್ರಯಾಣಿಕರಿಗೆ ಇರಿಸು ಮುರಿಸು

ವಿಮಾನದ ಪ್ರಯಾಣದ ವೇಳೆಯಲ್ಲಿಯೇ ಜೋಡಿಯೊಂದು ಸರಸ ಸಲ್ಲಾಪದಲ್ಲಿ ತೊಡಗಿದೆ‌. ಅದೂ ಕೂಡ ಸಹ ಪ್ರಯಾಣಿಕರ ಎದುರಲ್ಲೇ..! ಹೌದು. ಈ ಘಟನೆ ಯಾವ ವಿಮಾನದಲ್ಲಿ ನಡೆದಿದ್ದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. FLEA ಎಂಬ ‘ಎಕ್ಸ್’ ಖಾತೆಯ ಬಳಕೆದಾರರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

“ಇದು ವಿಮಾನದಲ್ಲಿ ಕಂಡಿದ್ದು. ನನಗೂ ನಂಬಲಾಗಿಲ್ಲ. ಅವರು ಸತತ 4 ತಾಸು ಸರಸದಲ್ಲಿ ತೊಡಗಿದ್ದರು” ಎಂದು ಬರೆಯಲಾಗಿದೆ. ಈ ಫೋಟೋಗಳ‌ನ್ನು ಸಾವಿರಾರು ಜನ ನೋಡಿದ್ದಾರೆ. ವಿಮಾನಲ್ಲಿ ಅಶ್ಲೀಲ ಚಟುವಟಿಕೆ ಮಾಡೋದು ಶಿಕ್ಷಾರ್ಹ ಅಪರಾಧ. ಇದನ್ನು ಉಲ್ಲಂಘಿಸುವ ಪ್ರಯಾಣಿಕರನ್ನು ವಿಮಾನ ಪ್ರಯಾಣದಿಂದ ನಿಷೇಧಿಸಬಹುದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Comments (0)
Add Comment