ವಿಮಾನದಲ್ಲಿ ಪರಿಚಾರಕರಾಗಿ ಮಹಿಳೆಯರೇ ಇರ್ತಾರೆ ಯಾಕೆ? – ನಿಮಗೆ ಈ ಎಲ್ಲಾ ಮಾಹಿತಿಯೇ ಇರಲಿಕ್ಕಿಲ್ಲ‌..!!

ಸಾಮಾನ್ಯವಾಗಿ ವಿಮಾನ ಪರಿಚಾರಕರಾಗಿ ಅಥವಾ ಗಗನಸಖಿಯರಾಗಿ ಹೆಚ್ಚಾಗಿ ಮಹಿಳೆಯರೇ ಇರುತ್ತಾರೆ. ಕೆಲವು ವಿಮಾನಯಾನ ಕಂಪೆನಿಗಳು ಪುರುಷರನ್ನು ನೇಮಿಸಿಕೊಳ್ಳುವುದೇ ಇಲ್ಲ. ಈ ಕೆಲಸಕ್ಕಾಗಿ ಹಗಲಿರುಳು ಶ್ರಮಿಸುವ ಪುರುಷರಿಗೆ ಮಾಡುವ ಅನ್ಯಾಯ ಇದು ಎಂಬ ಮಾತುಗಳೂ ಕೇಳಿಬರುತ್ತಿದೆ.

ಪುರುಷ ಉದ್ಯೋಗಿಗಳಿಗೂ ಇದೆ ಆದ್ಯತೆ

ಇತರ ವಿಮಾನಯಾನ ಸೇವೆಗಳಾದ ಗ್ರೌಂಡ್ ಸ್ಟಾಫ್, ರ್ಯಾಂಪ್ ಸೇವೆಗಳಿಗೆ ಸಾಮಾನ್ಯವಾಗಿ ಪುರುಷರನ್ನೇ ನೇಮಿಸಿಕೊಳ್ಳಲಾಗುತ್ತದೆ. ಈ ಕೆಲಸ ಹೆಚ್ಚಿನ ದೈಹಿಕ ಶ್ರಮ ಬೇಡುವುದರಿಂದ ಈ ವ್ಯವಸ್ಥೆ ಜಾರಿಯಲ್ಲಿದೆ.

ವಿಮಾನದೊಳಗೆ ಕಾರ್ಯ ನಿರ್ವಹಿಸಲು ಆಕರ್ಷಕ ವ್ಯಕ್ತಿತ್ವ ಹೊಂದಿದವರು ಆವಶ್ಯ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ವಿಚಾರದಲ್ಲಿ ಹೆಚ್ಚು ಸೂಕ್ತವಾಗಿರುತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ. ಹೀಗಾಗಿ ಈ ಉದ್ಯಮ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ.

ಲೆಕ್ಕಾಚಾರ ಏನು ಹೇಳುತ್ತದೆ?

ಅಂಕಿ-ಅಂಶಗಳ ಪ್ರಕಾರ ಕೆಲವು ದೇಶೀಯ ವಿಮಾನಯಾನ ಸಂಸ್ಥೆಗಳು ಪುರುಷ ಪರಿಚಾರಕರನ್ನು 20ರಲ್ಲಿ 2 ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು 10ರಲ್ಲಿ 4 ಅನುಪಾತದಲ್ಲಿ ಪುರುಷ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ.

ಮಹಿಳೆಯರಿಗೇ ಆದ್ಯತೆ ಯಾಕೆ? ಇಲ್ಲಿದೆ 5 ಕಾರಣಗಳು

  • ಪ್ರಯಾಣಿಕರು ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರ ಮಾತು, ಸೂಚನೆಯನ್ನು ಕೇಳುತ್ತಾರೆ, ಅನುಸರಿಸುತ್ತಾರೆ ಎನ್ನುವ ನಂಬಿಕೆ ಇದೆ.
  • ಮಹಿಳೆಯರು ಉತ್ತಮ ಕೇಳುಗರು ಎನ್ನುವುದು ಸಾಮಾನ್ಯ ನಂಬಿಕೆ. ಹೀಗಾಗಿ ಅವರಿಗೆ ಉತ್ತಮ ತರಬೇತಿ ನೀಡಲು ಸಾಧ್ಯವಾಗುತ್ತದೆ.
  • ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಲು, ಮಾತನಾಡಿಸಲು ಮಹಿಳೆಯರಿಗೆ ಸಾಧ್ಯವಾಗುತ್ತದೆ. ಹಾಗೆಯೇ ಅವರು ಹೃತ್ಪೂರ್ವಕವಾಗಿ ಪ್ರಯಾಣಿಕರಿಗೆ ವಿದಾಯ ಹೇಳಲು ಸಮರ್ಥರಿರುತ್ತಾರೆ.
  • ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಉದಾರ ಗುಣ ಹೊಂದಿರುತ್ತಾರೆ.
  • ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆ ತೂಕವನ್ನು ಹೊಂದಿರುತ್ತರೆ. ಇದು ಸಾಕಷ್ಟು ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ ಎನ್ನುವ ಲೆಕ್ಕಾಚಾರವೂ ಇದೆ.

ಹೀಗಿದ್ದೂ ಪುರುಷ, ಮಹಿಳಾ ಸಿಬ್ಬಂದಿ ಇಬ್ಬರೂ ಇದ್ದರೆ ತುರ್ತು, ವೈದ್ಯಕೀಯ ಪರಿಸ್ಥಿತಿ, ಶಿಸ್ತನ್ನು ಉತ್ತಮವಾಗಿ ಸರಿದೂಗಿಸಲು ಸಾಧ್ಯವಾಗುತ್ತದೆ ಎನ್ನುವ ಲೆಕ್ಕಾಚಾರವೂ ಇದೆ.

 

Comments (0)
Add Comment