ವಿಮಾನ ಪತನ, 14 ಮಂದಿ ಸಾವು

ಬ್ರೆಜಿಲ್‌ನ ಉತ್ತರ ಅಮೆಜಾನ್ ರಾಜ್ಯದಲ್ಲಿ ವಿಮಾನವೊಂದು ಪತನಗೊಂಡಿದೆ. ಈ ಅಪಘಾತದಲ್ಲಿ ೧೪ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಜ್ಯದ ರಾಜಧಾನಿ ಮನೌಸ್‌ನಿಂದ ಸುಮಾರು 400 ಕಿಮೀ (248 ಮೈಲುಗಳು) ದೂರದಲ್ಲಿರುವ ಬಾರ್ಸೆಲೋಸ್ ಪ್ರಾಂತ್ಯದಲ್ಲಿ ಈ ಅಪಘಾತ ಸಂಭವಿಸಿದೆ. ಶನಿವಾರ ಬಾರ್ಸೆಲೋಸ್​ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವಿಗೆ ಅಮೆಜನಾಸ್​​ನ ಗವರ್ನರ್ ವಿಲ್ಸನ್ ಲಿಮಾ ವಿಷಾಧ ವ್ಯಕ್ತಪಡಿಸಿದ್ದಾರೆ. ಭಾರೀ ಮಳೆಯ ನಡುವೆಯೇ ವಿಮಾನ ಲ್ಯಾಂಡ್ ಆಗಲು ಯತ್ನಿಸಿದ್ದು, ಅಪಘಾತ ಸಂಭವಿಸಿ ವಿಮಾನದಲ್ಲಿದ್ದ 14 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಲ್ಲಿನ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.

Comments (0)
Add Comment