ಶೂಟಿಂಗ್ ರೇಂಜ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ

ಹ್ಯಾಂಗ್ ಝೂ: ಏಷ್ಯನ್ ಗೇಮ್ಸ್ ನ ಶೂಟಿಂಗ್ ರೇಂಜ್ ನಲ್ಲಿ ಭಾರತ ಪದಕಗಳ ಬೇಟೆಯಾಡಿದೆ. ಇಂದು ಪುರುಷರ ಟೀಂ ಈವೆಂಟ್ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸರಬ್ಜಿತ್ ಸಿಂಗ್, ಶಿವ ನಾರ್ವಾಲ್ ಮತ್ತು ಅರ್ಜುನ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.

ಭಾರತದ ಸ್ಪರ್ಧಿಗಳು ಒಟ್ಟು,1734 ಅಂಕಗಳನ್ನು ಕಲೆ ಹಾಕಿ ಚೀನಾದ ಶೂಟರ್ ಗಳನ್ನು ಒಂದು ಅಂಕಗಳಿಂದ ಹಿಂದಿಕ್ಕಿದರು.

ವಿಯೆಟ್ನಾಂ ಪ್ರಬಲ ಪ್ರದರ್ಶನ ನೀಡಿ ಒಟ್ಟು 1730 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. 580 ಅಂಕಗಳನ್ನು ಗಳಿಸಿದ ಸರಬ್ಜೋತ್ ಐದನೇ ಸ್ಥಾನವನ್ನು ಪಡೆದುಕೊಂಡರೆ, ಅರ್ಜುನ್ 578 ಅಂಕಗಳೊಂದಿಗೆ ವೈಯಕ್ತಿಕ ಅರ್ಹತಾ ಸ್ಪರ್ಧೆಯಲ್ಲಿ ಎಂಟನೇ ಸ್ಥಾನ ಪಡೆದರು.

Comments (0)
Add Comment