ಶ್ರೀನಗರ; ಶುಕ್ರವಾರದ ನಮಾಝ್ ಗೆ ಅನುಮತಿ ನಿರಾಕರಣೆ

ಗಾಝಾದ ಮೇಲೆ ಇಸ್ರೇಲ್ ಆಕ್ರಮದ ವಿರುದ್ಧದ ಪ್ರತಿಭಟನೆಯ ಆತಂಕದ ನಡುವೆ ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆಯನ್ನು ಸತತ ಮೂರನೇ ಶುಕ್ರವಾರವು ನಿರ್ಬಂಧಿಸಲಾಗಿದೆ.

ನಗರದ ನೌಹಟ್ಟಾ ಪ್ರದೇಶದಲ್ಲಿರುವ ಭವ್ಯ ಮಸೀದಿಗೆ ಬೀಗ ಹಾಕಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶ್ಮೀರದ ಮಿರ್ವೈಜ್ ಉಮರ್ ಫಾರೂಕ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್, ಐತಿಹಾಸಿಕ ಜಾಮಿಯಾ ಮಸೀದಿಯನ್ನು ಪದೇ ಪದೇ ಮುಚ್ಚುವುದು ಮತ್ತು ಮಿರ್ವೈಜ್ ಅವರ ಗೃಹ ಬಂಧನವು ಜಮ್ಮು- ಕಾಶ್ಮೀರದ ಪರಿಸ್ಥಿತಿಯನ್ನು ನೆನಪಿಸುತ್ತದೆ. ತಮ್ಮ ಮೇಲಿನ ನಿಷೇಧ ಹಾಗೂ ನಿರ್ಬಂಧದ ನಡುವೆಯೂ ಕಾಶ್ಮೀರದ ಜನರು ಫೆಲಸ್ತೀನ್ ಜನರೊಂದಿಗೆ ನಿಲ್ಲುತ್ತಾರೆ. ಯುದ್ಧದ ಮೂಲಕ ಎಂದಿಗೂ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಅದು ಕೇವಲ ನಾಶವಾಗಿದೆ. ಯುದ್ಧದಿಂದ ಹೆಚ್ಚು ಅಪನಂಬಿಕೆ, ಕ್ರೂರತೆ ಸೃಷ್ಟಿಯಾಗುತ್ತದೆ ಎಂದು ಹೇಳಿದೆ.

ಗಾಝಾದಲ್ಲಿ ಸಾವಿರಾರು ಮಕ್ಕಳು ಬಾಂಬ್ ದಾಳಿಗೆ ಬಲಿಯಾಗುತ್ತಿದ್ದಾರೆ. ಆಸ್ಪತ್ರೆಗಳು ಮತ್ತು ಮನೆಗಳು ನೆಲಸಮವಾಗುತ್ತಿವೆ. ಪ್ಯಾಲೆಸ್ತೀನಿಯಾದವರ ಮೇಲಿನ ಯುದ್ಧ ಮಾನವೀಯತೆಯ ಮೇಲೆ ಕಳಂಕ. ಇದು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ. ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು ನಮ್ಮ ಆಶಯ ಎನ್ನುವವರು ಯುದ್ಧವನ್ನು ಬೆಂಬಲಿಸುತ್ತಿದ್ದಾರೆ ಅಥವಾ ಈ ವಿಚಾರದಲ್ಲಿ ಮೌನವಾಗಿರುವುದು ಕಂಡು ಬಂದಿದೆ ಎಂದು ಹುರಿಯತ್ ಕಾನ್ಫರೆನ್ಸ್ ಹೇಳಿದೆ

Comments (0)
Add Comment