‘ಶ್ರೀರಾಮಲಲ್ಲಾ ಅರಳಿದ್ದ ಶಿಲೆಗೂ ದಂಡ’: 80 ಸಾವಿರ ರೂ. ಬಿಜೆಪಿ ನೀಡಲಿದೆ- ಪ್ರತಾಪ್​ ಸಿಂಹ

ಬೆಂಗಳೂರು:  ಅಯೋಧ್ಯೆ ರಾಮ ಮಂದಿರದಲ್ಲಿ ಬಲರಾಮನ ಮೂರ್ತಿ ಪ್ರತಿಷ್ಠಾನೆಯಾಗಿದೆ. ಆದರೆ ಮೈಸೂರಿನಿಂದ ಕಳಿಸಲಾಗಿದ್ದ ‘ಶ್ರೀರಾಮಲಲ್ಲಾ’ ಮೂರ್ತಿ ಅರಳಿರುವ ಕಲ್ಲಿಗೂ ದಂಡ ಬಿದ್ದಿದ್ದು, ಈ ಹಣವನ್ನು ಬಿಜೆಪಿ ನೀಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಶ್ರೀರಾಮನ ಮೂರ್ತಿ ಮೂಡಿ ಬಂದಿರುವ ಕೃಷ್ಣಶಿಲೆಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಿಸಿದ್ದು, ಇದನ್ನು ಗುತ್ತಿಗೆದಾರರಾದ ಶ್ರೀನಿವಾಸ್ ನಟರಾಜ್ ಪಾವತಿಸಿದ್ದರು. ದಂಡ ಬಿದ್ದ ಕೃಷ್ಣಶಿಲೆ ಈಗ ರಾಮನ ಮೂರ್ತಿಯಾಗಿದ್ದು, ಇಡೀ ದೇಶವೇ ಪೂಜೆಗೆ ಸಿದ್ಧಗೊಂಡಿದೆ. ದಂಡದ ಮೊತ್ತ 80,000 ರೂಪಾಯಿ ಹಣವನ್ನು ಬಿಜೆಪಿ ನೀಡಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಏನಾಗಿತ್ತು?

ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದಲ್ಲಿ ಮಾಲೀಕ ರಾಮದಾಸ ಅವರು ಭೂಮಿ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು. ಈ ವೇಳೇ ಅವರ ಜಮೀನಿನಲ್ಲಿ ಕೃಷ್ಣಶಿಲೆಗಳು ದೊರಕ್ಕಿದ್ದವು. ಈ ವಿಚಾರ ತಿಳಿಯುತ್ತಿದ್ದಂತೆ ಅನೇಕರು ಮೂರ್ತಿ ತಯಾರಿಕೆಗೆ ಕೃಷ್ಣ ಶಿಲೆ ತೆಗೆದುಕೊಂಡು ಹೋಗುತ್ತಿದ್ದರು. ಇನ್ನು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾ ವಿಗ್ರಹ ಕೆತ್ತಿದ್ದು ಕೂಡ ಇದೇ ಶಿಲೆಯಲ್ಲಿ. ಅಯೋಧ್ಯೆಯಲ್ಲಿ ಬಲರಾಮನ ಮೂರ್ತಿಯನ್ನು ಇದೇ ಶಿಲೆಯಿಂದ ಮಾಡಲಾಗಿದೆ.

ಹತ್ತು ಅಡಿ ಆಳದಲ್ಲಿ ಭೂಮಿ ಕೊರೆದು ಬೃಹತ್ ಕಲ್ಲುಗಳನ್ನು ತೆರೆದಿರುವ ಹಿನ್ನೆಲೆಯಲ್ಲಿ ಯಾರೋ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿರುವ ಅಧಿಕಾರಿಗಳು ಅನುಮತಿ ಇಲ್ಲದೇ ಅನಧಿಕೃತವಾಗಿ ಕಲ್ಲು ತೆಗೆದ ಹಿನ್ನೆಲೆಯಲ್ಲಿ ಕಲ್ಲುಗಳ ಗಾತ್ರಗಳ ಆಧಾರದಲ್ಲಿ 80 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ಕಲ್ಲು ತೆಗೆಯಲು ಅನುಮತಿ ಪಡೆಯಬೇಕು ಎನ್ನುವ ಅರಿವಿಲ್ಲದೆ ಗುತ್ತಿಗೆದಾರ ಶ್ರೀನಿವಾಸ್​ ನಟರಾಜನ್​​ ಅನ್ಯ ಮಾರ್ಗವಿಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿಧಿಸಿದ ದಂಡವನ್ನು ಆನ್‌ಲೈನ್ ಮೂಲಕವೇ ಪಾವತಿಸಿದ್ದರು.

Comments (0)
Add Comment