— ಸಂಗಮೇಶ್ವರದ ಅಪ್ಪಣ್ಣ  ಅವರ ವಚನ

 

 

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಶ್ರವವೆತ್ತಿ ನಡೆವಾಗ ಸ್ಮಶಾನವೈರಾಗ್ಯವಹುದು.

ಪುರಾಣಂಗಳ ಕೇಳುವಲ್ಲಿ ಪುಸ್ತಕವೈರಾಗ್ಯವಹುದು.

ನೆಟ್ಟನೆ ಶರಣಚಾರಿತ್ರವ ಕೇಳುವಲ್ಲಿ ಮರ್ಕಟವೈರಾಗ್ಯವಹುದು.

ಏನನೋದಿಯೂ ಏನ ಕೇಳಿಯೂ ಏನೂ ಫಲವಿಲ್ಲ.

ಹಿಂದೆ ಸತ್ತುದ ಕೇಳುತ್ತಿದೇನೆ.

ಮತ್ತೆಯೂ ಎನ್ನ ಅನ್ವಯದವರು ಅಲಿವುದ ಕಾಣುತ್ತಿದೇನೆ.

ಶುನಕ ಬೂದಿಯೊಳು ಮಲಗಿರ್ದಲ್ಲಿ ತನ್ನಾದಿಯ ನೆನೆದು,

ದೇಹದಿಚ್ಛೆಯ ಹಳಿದು, ಜನನ ಜಾಡ್ಯವ ಪರಿವೆನೆಂದು ಯೋಚಿಸುತ್ತಿರಲು,

ಮೆಲ್ಲನೆ ನಿದ್ರೆ ತಿಳಿಯಲು, ಆಗ ತನ್ನಾದಿಯ ಮರೆದು,

ಭ್ರಾಂತೆಡೆಗೊಂಡು, ಕಿವಿಯ ಕೊಡಹುತ್ತ ಹಡಿಕೆಗೆ ಹರಿವಂತೆ ಎನ್ನ ಮುಕ್ತಿ.

ಇಂತಪ್ಪ ಅನುಕ್ತಿಯನಳಿದು, ದೇಹದಿಚ್ಛೆಯ ಹಳಿದು,

ಪರಮವಿರಕ್ತಿಯನಿತ್ತು ರಕ್ಷಿಸಯ್ಯಾ,ಬಸವಪ್ರಿಯ ಕೂಡಲಚೆನ್ನಸಂಗಮದೇವಾ.

 

-ಸಂಗಮೇಶ್ವರದ ಅಪ್ಪಣ್ಣ

--- ಸಂಗಮೇಶ್ವರದ ಅಪ್ಪಣ್ಣ  ಅವರ ವಚನ
Comments (0)
Add Comment